ಕಳ್ಳತನ ಮಾಡಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ಶುಲ್ಕ ಪಾವತಿಸುತ್ತಿದ್ದ ಆಧುನಿಕ ರಾಬಿನ್ ಹುಡ್ ಕಳ್ಳ ಸೇರಿದಂತೆ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೇಗೂರು ನಿವಾಸಿ ಶಿವು ಅಲಿಯಾಸ್ ಶಿವರಪ್ಪನ್ ಹಾಗೂ ಆತನ ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಮತ್ತು ವಿವೇಕ್ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದು, 24 ಲಕ್ಷ ಮೌಲ್ಯದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ಹೆಂಡತಿ ಮಕ್ಕಳಿಲ್ಲದೇ ಏಕಾಂಗಿಯಾಗಿದ್ದ ಶಿವು ಒಂಟಿಯಾಗಿದ್ದು, ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ವೇಳೆ ಶಾಲೆಯ ಮಕ್ಕಳು ಫೀಸ್ ಕಟ್ಟಲು ಪರದಾಡುತ್ತಿದ್ದುದ್ದನ್ನು ಗಮನಿಸಿ ಸಾಯುವ ಮುನ್ನ ಕಳ್ಳತನ ಮಾಡಿ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ನಿರ್ಧರಿಸಿದ್ದ. ಇದೇ ವೇಳೆ ಕಷ್ಟದಲ್ಲಿದ್ದ ಸ್ನೇಹಿತರಾದ ಅನಿಲ್ ಮತ್ತು ವಿವೇಕ್ ಅವರನ್ನು ತನ್ನ ಜೊತೆ ಸೇರಿಸಿಕೊಂಡಿದ್ದ.
ಕಳ್ಳತನ ಮಾಡಿದ ಚಿನ್ನದ ಗಟ್ಟಿಗಳನ್ನು ತಮಿಳುನಾಡಿನಲ್ಲಿ ಸ್ವಲ್ಪ ಭಾಗ ಮಾರಿ ಅನಿಲ್ ಮತ್ತು ವಿವೇಕ್ ಗೆ ತಲಾ 4 ಲಕ್ಷ ರೂ. ಆಟೋ ಕೊಡಿಸಿದ್ದ. ಅಲ್ಲದೇ ಸುಮಾರು 30 ಮಕ್ಕಳ ಶಾಲೆ ಮತ್ತು ಕಾಲೇಜು ಶುಲ್ಕವನ್ನು ಭರ್ತಿ ಮಾಡಿದ್ದ.


