ಅಹಂಕಾರದಲ್ಲಿ ಮೆರೆಯುತ್ತಿದ್ದವರನ್ನು ಶ್ರೀರಾಮ ದೇವರೇ 241ಕ್ಕೆ ನಿಲ್ಲಿಸಿ ಪಾಠ ಕಲಿಸಿದ್ದಾನೆ ಎಂದು ಆರ್ ಎಸ್ ಎಸ್ ಮುಖಂಡ ಇಂದ್ರೇಷ್ ಕುಮಾರ್ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.
ಜೈಪುರದ ಕನೋಟಾದಲ್ಲಿ ಗುರುವಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮನ ಮೇಲೆ ಅವರು ತೋರುತ್ತಿದ್ದ ಭಕ್ತಿ ನಂತರ ಅಹಂಕಾರವಾಗಿ ಬದಲಾಗಿತ್ತು. ಆ ಪಕ್ಷ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರಬಹುದು. ಆದರೆ 241ಕ್ಕೆ ಕಡಿವಾಣ ಹಾಕಿ ಅಹಂಕಾರವನ್ನು ಮುರಿದ ಶ್ರೀರಾಮ ಎಂದರು.
ಇದೇ ವೇಳೆ ರಾಮನನ್ನು ವಿರೋಧಿಸಿದ ಪ್ರತಿಪಕ್ಷ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, ಶ್ರೀರಾಮನ ಮೇಲೆ ಭಕ್ತಿ ಇಲ್ಲದ ಇಂಡಿಯಾ ಮೈತ್ರಿಕೂಟ ಎಲ್ಲಾ ಪಕ್ಷಗಳು ಸೇರಿದರೂ 234 ನಿಂತಿದ್ದಾರೆ. ದೇವರ ಶಿಕ್ಷೆ ಎಲ್ಲರಿಗೂ ಸರಿಯಾಗಿದೆ ಎಂದು ಅವರು ಹೇಳಿದರು.