Monday, May 25, 2026
Google search engine
Homeಅಪರಾಧಬೆಂಗಳೂರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಮಕ್ಕಳ ಕಥೆ ಪುಸ್ತಕ ರಟ್ ನಲ್ಲಿದ್ದ 38.60 ಕೋಟಿ...

ಬೆಂಗಳೂರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಮಕ್ಕಳ ಕಥೆ ಪುಸ್ತಕ ರಟ್ ನಲ್ಲಿದ್ದ 38.60 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ

ಮಕ್ಕಳ ಕಥೆ ಪುಸ್ತಕಗಳ ರಟ್ ನೊಳಗೆ ಅಡಗಿಸಿಕೊಂಡು ಬೆಂಗಳೂರಿಗೆ ಬಂದಿದ್ದ ವಿದೇಶೀ ಪ್ರಯಾಣಿಕನಿಂದ 38.60 ಕೋಟಿ ರೂ. ಮೌಲ್ಯದ ಕೊಕೆನ್ ಅನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು 7.72 ಕೆಜಿ ತೂಕದ ಕೊಕೆನ್ ವಶಪಡಿಸಿಕೊಂಡಿದ್ದಾರೆ.

ಬ್ರೆಜಿಲ್​ನ ಸೌಪಾಲೊ ಏರ್​​ಪೋರ್ಟ್​ನಿಂದ ಬಂದಿದ್ದ ವ್ಯಕ್ತಿಯ ಲಗೇಜ್ ಅನ್ನು ಅನುಮಾನ ಬಂದು ತಪಾಸಣೆ ಮಾಡಿದ ಕಸ್ಟಮ್ಸ್ ಅಧಿಕಾರಿಗಳು ಭಾರೀ ಪ್ರಮಾಣದ ಕೊಕೆನ್ ಪತ್ತೆ ಹಚ್ಚಿದ್ದಾರೆ.

ಬ್ರೆಜಿಲ್​ನ ಸೌಪಾಲೊ ಏರ್​​ಪೋರ್ಟ್​ನಿಂದ ಕೆಐಎಬಿಗೆ ಬಂದಿದ್ದ ಪ್ರಯಾಣಿಕ ಲಗೇಜ್ ಬ್ಯಾಗ್​​ನಲ್ಲಿ ಮಕ್ಕಳ ಕಥೆ ಪುಸ್ತಕಗಳ ಬುಕ್​ಗಳ ರಟ್ ಅಡಿಯಲ್ಲಿ ಡ್ರಗ್ಸ್​ ಇಟ್ಟಿದ್ದ. ಅನುಮಾನಗೊಂಡ ಏರ್​ಪೋರ್ಟ್​ ಕಸ್ಟಮ್ಸ್​ ಅಧಿಕಾರಿಗಳು ಲಗೇಜ್​ ಬ್ಯಾಗ್​ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆ ಆಗಿದೆ.

ಡ್ರಗ್ಸ್ ಅಡಗಿಸಿ ಸಾಗಾಟಕ್ಕೆ ಯತ್ನಿಸಿದ್ದ ಪ್ರಯಾಣಿಕನನ್ನು ಇದೀಗ ವಶಕ್ಕೆ ಪಡೆದಿರುವ ಏರ್​ಪೋರ್ಟ್​ ಕಸ್ಟಮ್ಸ್​ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ರಾಜ್ಯದ ಪ್ರತಿಷ್ಠಿತ ಸ್ವಾಮೀಜಿ ಬಳಿ 1 ಕೋಟಿಗೆ ಬ್ಲಾಕ್ ಮೇಲ್: ಮಹಿಳೆ ಅರೆಸ್ಟ್

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿ ಬಳಿ 1 ಕೋಟಿಗೆ ಬ್ಲ್ಯಾಕ್‌ಮೇಲ್ ಮಾಡಿದ ಮಹಿಳೆಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸ್ವಾಮೀಜಿಗೆ ಬ್ಲಾಕ್ ಮೇಲ್ ಮಾಡಿ 4.5 ಲಕ್ಷ ರೂ. ವಸೂಲು ಮಾಡಿದ್ದ ಚಿಕ್ಕಮಗಳೂರು ಮೂಲದ ಸ್ಪೂರ್ತಿ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.

ಸ್ವಾಮೀಜಿಯಿಂದ 4.5 ಲಕ್ಷ ರೂ. ವಸೂಲಿ ಮಾಡಿದ್ದ ಮಹಿಳೆ ಮತ್ತೆ 1 ಕೋಟಿ ರೂ. ನೀಡುವಂತೆ ಒತ್ತಡ ಹೇರಿದ್ದಳು. ಇದರಿಂದ ಬೇಸತ್ತ ಸ್ವಾಮೀಜಿ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಐದು ತಿಂಗಳ ಹಿಂದೆ ಸ್ವಾಮೀಜಿಗೆ ಕರೆ ಮಾಡಿದ ಸ್ಪೂರ್ತಿ, ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಪರಿಚಯಿಸಿಕೊಂಡಿದ್ದು, ಬಳಿಕ ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಳು.

ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದಾಗ 4.5 ಲಕ್ಷ ರೂ. ವಸೂಲು ಮಾಡಿದ್ದ ಸ್ಫೂರ್ತಿ  ನಂತರ  1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಳು. ಆದರೆ ಯಾವ ಕಾರಣಕ್ಕೆ ಬ್ಲಾಕ್ ಮೇಲ್ ಮಾಡಿದ್ದರು ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments