Friday, November 22, 2024
Google search engine
Homeತಾಜಾ ಸುದ್ದಿಪ್ರೀತಿಯ ಗಂಡ ನಿನಗೆ ಡಿವೋರ್ಸ್ ಕೊಟ್ಟಿದ್ದೇನೆ.. ನಿನ್ನ ಮಾಜಿ ಪತ್ನಿ: ಇನ್ ಸ್ಟಾಗ್ರಂ ಪೋಸ್ಟ್ ಮಾಡಿದ...

ಪ್ರೀತಿಯ ಗಂಡ ನಿನಗೆ ಡಿವೋರ್ಸ್ ಕೊಟ್ಟಿದ್ದೇನೆ.. ನಿನ್ನ ಮಾಜಿ ಪತ್ನಿ: ಇನ್ ಸ್ಟಾಗ್ರಂ ಪೋಸ್ಟ್ ಮಾಡಿದ ದುಬೈ ರಾಣಿ!

ನಾನು ನಿನಗೆ ವಿಚ್ಚೇದನ ನೀಡಿದ್ದೇನೆ.. ನಾನು ನಿನಗೆ ವಿಚ್ಚೇದನ ನೀಡಿದ್ದೇನೆ.. ನಾನು ನಿನಗೆ ವಿಚ್ಚೇದನ ನೀಡಿದ್ದೇನೆ.. ಟೇಕ್ ಕೇರ್, ನಿನ್ನ ಮಾಜಿ ಪತ್ನಿ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ದುಬೈ ರಾಣಿ ಪತಿಗೆ ವಿಚ್ಛೇದನ ನೀಡಿ ಭಾರೀ ಸುದ್ದಿ ಆಗಿದ್ದಾರೆ.

ದುಬೈ ದೊರೆಯ ಪುತ್ರಿ ಶೈಕಾ ಮಹ್ರಾ ಬಿಂಟ್ ಮೊಹಮದ್ ಬಿನ್ ರಶೀದ್ ಅಲ್ ಮಕ್ತೊಮ್ ಸಾರ್ವಜನಿಕವಾಗಿ ಅದರಲ್ಲೂ ಸಾಮಾಜಿಕ ಜಾಲತಾಣದ ಮೂಲಕ ಪತಿ ಶೇಖ್ ಮಾನ ಬಿನ್ ಮೊಹಮದ್ ಬಿನ್ ರಶೀದ್ ಬಿಲ್ ಅಲ್ ಮಕ್ತೂಮ್ ಅವರಿಗೆ ಡಿವೋರ್ಸ್ ನೀಡಿದ್ದಾರೆ.

ದಂಪತಿಗೆ ಎರಡು ತಿಂಗಳ ಹಿಂದೆಯಷ್ಟೇ ಮಗುವಾಗಿದ್ದು, ಇದರ ಬೆನ್ನಲ್ಲೇ ವಿಚ್ಛೇದನ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಶೈಕಾ ಅವರ ಇನ್ ಸ್ಟಾಗ್ರಾಂ ಹ್ಯಾಕ್ ಆಗಿದೆ ಎಂಬ ವದಂತಿಯೂ ಇದೆ.

ವಿಚ್ಚೇದನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾನ್ಯವಾಗಿ ಇಸ್ಲಾಮ್ ನಲ್ಲಿ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವುದು ಪುರುಷರೇ ಹೊರತು ಮಹಿಳೆಯರಲ್ಲ. ಆದರೆ ಇದೇ ಮೊದಲ ಬಾರಿ ಮಹಿಳೆಯೊಬ್ಬರು ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಡಿವೋರ್ಸ್ ಹೇಳಿರುವುದು ಇದೇ ಮೊದಲು ಎನ್ನಲಾಗಿದೆ.

ವಿಚ್ಛೇದನ ಸುದ್ದಿ ಬೆನ್ನಲ್ಲೇ ದಂಪತಿ ಪರಸ್ಪರರು ಅನ್ ಫಾಲೋ ಮಾಡಿದ್ದು, ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದ್ದ ಜೊತೆಗಿರುವ ಎಲ್ಲಾ ಫೋಟೊಗಳನ್ನು ಡಿಲಿಟ್ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments