ಫೇಸ್ ಬುಕ್ ನಲ್ಲಿ ಪರಿಚಯವಾದ ತನಗಿಂತ 14 ವರ್ಷ ಹಿರಿಯ ಮಹಿಳೆಯನ್ನು ಮದುವೆ ಆಗುವುದಾಗಿ ಯೋಧ ವಂಚಿಸಿ ಕುಟುಂಬ ಸಮೇತ ತಲೆಮರೆಸಿಕೊಂಡಿರುವ ಘಟನೆ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ನಡೆದಿದೆ.
ದೌರ್ಜನ್ಯ ಹಾಗೂ ವಂಚನೆಗೆ ಒಳಗಾದ ಮಹಿಳೆಯರ ಪರ ಹೋರಾಟ ನಡೆಸುತ್ತಿದ್ದ ಹೋರಾಟಗಾರ್ತಿ ಪ್ರಮೋದಾ ಹಜಾರೆ ಅವರಿಗೆ ಮಾಜಿ ಯೋಧ ಅಕ್ಷಯ್ ನಲವೆಡೆ ಎಂಬಾತ ವಂಚಿಸಿದ್ದಾನೆ.
ಫೇಸ್ ಬುಕ್ ನಲ್ಲಿ 6 ವರ್ಷಗಳ ಹಿಂದೆ ಪರಿಚಯವಾದ ಬಿಜಗರ್ಣಿ ಗ್ರಾಮದ ಅಕ್ಷಯ್ ನಲವೆರೆ ದೇವರ ಕೋಣೆಯಲ್ಲಿ ತಾಳಿ ಕಟ್ಟಿ ಮದುವೆ ಆಗಿದ್ದ. 15 ದಿನಕ್ಕೊಮ್ಮೆ ರಜೆಯ ಮೇಲೆ ಊರಿಗೆ ಬಂದಾಗ ಪ್ರಮೋದಾ ಮನೆಯಲ್ಲೇ ನೆಲೆಸುತ್ತಿದ್ದಅಕ್ಷಯ್ ಮದುವೆ ಆಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಅಕ್ಷಯ್ ೯ ಮಹಿಳೆಯೊಂದಿಗೆ ಸಂಪರ್ಕ ಇತ್ತು. ಇದನ್ನು ಪ್ರಶ್ನಿಸಿದಾಗ ನಿನ್ನನ್ನು ಮದುವೆ ಆದ ಕೂಡಲೇ ಇವರ ಸಂಪರ್ಕ ಬಿಡುತ್ತೇನೆ ಎಂದು ನಂಬಿಸುತ್ತಿದ್ದ. ಇತ್ತೀಚೆಗೆ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಆಗಿರುವ ವಿಷಯ ತಿಳಿದ ಪ್ರಮೋದಾ ಮನೆಗೆ ಹೋಗಿ ಗಲಾಟೆ ಮಾಡಿದಾಗ ಕುಟುಂಬದವರು ಎಲ್ಲಾ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಕೆಲವು ದಿನಗಳ ನಂತರ ಅಕ್ಷಯ್ ಮದುವೆ ಆಗಿರುವ ವಿಷಯ ತಿಳಿಯುತ್ತಿದ್ದಂತೆ ಮನೆಗೆ ಹೋದರೆ ಯೋಧನ ಮನೆಯವರು ಬಾಗಿಲು ಹಾಕಿಕೊಂಡು ತಲೆಮರೆಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಪ್ರಮೋದಾ ನ್ಯಾಯ ಸಿಗುವವರೆಗೂ ಯೋಧನ ಮನೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಯೋಧನ ಮನೆಯ ಮುಂದೆ ಕಣ್ಣೀರುಹಾಕುತ್ತಾ ಕೂತಿದ್ದಾರೆ.
ಮಹಿಳೆಯರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಿದ್ದ ನನಗೆ ಈತ ಮೋಸ ಮಾಡಿದ್ದಾನೆ. ನನಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದು ಪ್ರಮೋದಾ ಪಟ್ಟು ಹಿಡಿದಿದ್ದಾರೆ.