Home ಜಿಲ್ಲಾ ಸುದ್ದಿ Dharwad ಶಿಕ್ಷಣ ಪ್ರೇಮಿ ಸಾವಮ್ಮ ಹೊಂಗಲ ಇನ್ನಿಲ್ಲ

Dharwad ಶಿಕ್ಷಣ ಪ್ರೇಮಿ ಸಾವಮ್ಮ ಹೊಂಗಲ ಇನ್ನಿಲ್ಲ

ಗ್ರಾಮದ ಮಕ್ಕಳ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಿದ್ದ ಧಾರವಾಡ ತಾಲೂಕಿನ ಜೀರಿಗವಾಡ ಗ್ರಾಮದ ಶಿಕ್ಷಣ ಪ್ರೇಮಿ ಶ್ರೀಮತಿ ಸಾವಮ್ಮ ಈರಪ್ಪ ಹೊಂಗಲ (92) ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ.

by Editor
0 comments
savamma hongala

ತಮ್ಮೂರಿನ ಶಾಲೆಯ ಶಿಕ್ಷಕರಿಗೆ ಸತತ 42 ವರ್ಷಗಳವರೆಗೆ ತಮ್ಮ ಜೀವಿತಾವಧಿಯವರೆಗೂ ಅನ್ನದಾನದ ಮೂಲಕ ತಮ್ಮ ಗ್ರಾಮದ ಮಕ್ಕಳ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಿದ್ದ ಧಾರವಾಡ ತಾಲೂಕಿನ ಜೀರಿಗವಾಡ ಗ್ರಾಮದ ಶಿಕ್ಷಣ ಪ್ರೇಮಿ ಸಾವಮ್ಮ ಈರಪ್ಪ ಹೊಂಗಲ (92) ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ.

ಇಬ್ಬರು ಪುತ್ರರನ್ನು ಹೊಂದಿದ್ದ ಇವರಿಗೆ ಈಗ ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ. ಅತ್ಯಂತ ಸರಳ, ಸಜ್ಜನ, ಸಾತ್ವಿಕರಾಗಿದ್ದ ಇವರು, ತಮ್ಮ ಊರಿನ ಮಕ್ಕಳ ಶಿಕ್ಷಣ ಕಲಿಕೆಗೆ ಯಾವುದೇ ತೊಂದರೆ ಆಗಬಾರದೆಂದು ತಮ್ಮೂರಿನ ಶಾಲೆಯ ಶಿಕ್ಷಕರಿಗೆ ನಿರಂತರ ಅನ್ನದಾಸೋಹ ಮಾಡುತ್ತಾ ಬಂದಿರುವ ಈ ಅಜ್ಜಿ ಎಲ್ಲರಿಗೂ ಮಾದರಿಯಾಗಿದ್ದರು.

ಕೇವಲ ಶಿಕ್ಷಕರಿಗೆ ಅಷ್ಟೇ ಅಲ್ಲದೇ ಮನೆಗೆ ಬರುವ ಪ್ರತಿಯೊಬ್ಬರಿಗೂ ಆದರಿಸುವ ಮೂಲಕ “ಅತಿಥಿ ದೇವೋಭವ” ಎಂಬ ಭವ್ಯ ಭಾರತೀಯ ಸಂಸ್ಕೃತಿಯನ್ನು ಈ ಅಜ್ಜಿ ಸಾಕಾರಗೊಳಿಸಿದ್ದರು. ಶಿಕ್ಷಣ ಮತ್ತು ಅನ್ನ ದಾಸೋಹ ಪ್ರೇಮಿ ಸಾವಮ್ಮ ಹೊಂಗಲ್ ಅಗಲಿಕೆಗೆ ಇಡೀ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಕಣ್ಣೇರು ಹಾಕಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಹೊಸ ವರ್ಷ ಪಾರ್ಟಿಗೆ ಹೋದ ಪ್ರಿಯಕರಿಗೆ ಚಾಕು ಇರಿದ ಪ್ರೇಯಸಿ! World News ಅಮೆರಿಕ ಇತಿಹಾಸದಲ್ಲೇ ದಾಖಲೆಯ 150 ಪೈಪ್ ಬಾಂಬ್ ಪತ್ತೆ! ಗುಜರಾತ್ ನಲ್ಲಿ ಸಿಕ್ಕಿಬಿದ್ದ 8 ಪಾಕಿಸ್ತಾನಿಯರಿಗೆ 20 ವರ್ಷ ಜೈಲು! ರಾಜಕೀಯ ದ್ವೇಷಕ್ಕಾಗಿ ಪ್ರಿಯಾಂಕ ಖರ್ಗೆ ರಾಜೀನಾಮೆ ಕೇಳ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ಭಯ ಕಡಿಮೆ ಮಾಡೋಕೆ ಅಂತಾನೆ ಅಭಿಮಾನಿ ದೇವರುಗಳಿದ್ದಾರೆ: ಕ್ಯಾನ್ಸರ್ ಗೆದ್ದ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್! ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳೋಣ: ಅಧಿಕಾರಿಗಳಿಗೆ ಸಿಎಂ ಸಲಹೆ ಹೊಸವರ್ಷ ದಿನ ಮದ್ಯ ಕುಡಿಸಿ ತಾಯಿ, ನಾಲ್ವರು ತಂಗಿಯರ ಕೊಲೆಗೈದ ಮಗ! ಐಶ್ವರ್ಯ ಗೌಡ, ಹರೀಶ್ ಹೈಕೋರ್ಟ್ ಜಾಮೀನು; ಕೂಡಲೇ ಬಿಡುಗಡೆಗೆ ಸೂಚನೆ! ಹೊಸವರ್ಷದ ದಿನ 16 ಸೂರ್ಯೋದಯ ವೀಕ್ಷಿಸಿದ ಸುನೀತಾ ವಿಲಿಯಮ್ಸ್! ಹೊಸವರ್ಷಕ್ಕೆ ಸಿಹಿಸುದ್ದಿ ಘೋಷಿಸಿದ ಇಸ್ರೊ: ಜನವರಿಯಲ್ಲಿ 100ನೇ ಮೈಲುಗಲ್ಲು ಸಾಧನೆ!