ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಕಾರ್ತಿಕ ಮಾಸದಲ್ಲಿ ಕೋಟ್ಯಂತರ ರೂಪಾಯಿ ದೇಣಿಗೆ ರೂಪದಲ್ಲಿ ಹರಿದು ಬಂದಿದ್ದು, ಕಳೆದ ಒಂದು ತಿಂಗಳಲ್ಲಿ ಸುಮಾರು 2.50 ಕೋಟಿ ರೂ. ಸಂಗ್ರಹವಾಗಿದೆ.
ಮಂಡ್ಯ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಬುಧವಾರ ಹಣದ ಎಣಿಕೆ ಕಾರ್ಯ ನಡೆದಿದ್ದು, ಹುಂಡಿಗೆ ಕಳೆದ 27 ದಿನಗಳ ಅವಧಿಯಲ್ಲಿ 2.43 ಕೋಟಿ ರೂ. ಕಾಣಿಕೆ ಬಿದ್ದಿದ್ದು, ನಗದು ಹಣ ಜೊತೆಗೆ 62 ಗ್ರಾಂ ಚಿನ್ನ, 2.51 ಕೆಜಿ ಬೆಳ್ಳಿಯನ್ನು ಭಕ್ತರು ಅರ್ಪಿಸಿದ್ದಾರೆ.
ಬಿಗಿ ಬಂದೋಬಸ್ತ್ನಲ್ಲಿ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿಗಳ ಎಣಿಕೆ ಕಾರ್ಯ ನಡೆಯಿತು.
ಈ ಬಾರಿ ದೀಪಾವಳಿ ಹಬ್ಬ, ಅಮವಾಸ್ಯೆ ಹಾಗೂ ಕಾರ್ತಿಕ ಸೋಮವಾರ ಮುಂತಾದ ಸರಣಿ ಹಬ್ಬಗಳು ಬಂದಿದ್ದರಿಂದ ಭಕ್ತರು ಹರಿದು ಬಂದಿದ್ದು, ಕಾಣಿಕೆ ಅರ್ಪಿಸುವಲ್ಲಿಯೂ ದಾರಳತನ ತೋರಿದ್ದಾರೆ.