ಪಾಕಿಸ್ತಾನ ಗಡಿಯಲ್ಲಿ ಕಣ್ಗಾವಲಿಗಾಗಿ ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳಿಗೆ ಬಲ ತುಂಬಲು ಡ್ರೋಣ್-10 ಸೇರ್ಪಡೆ ಆಗಲಿವೆ.
ಅದಾನಿ ಡಿಫೆನ್ಸ್ ಸಿಸ್ಟಮ್ ಸಂಸ್ಥೆ ಅಭಿವೃದ್ದಿಪಡಿಸಿದ ಸ್ಯಾಟಲೈಟ್ ಗಳಿಂದ ನಿರ್ವಹಿಸಬಲ್ಲ ಹರ್ಮೆಸ್-900 ಅಥವಾ ದೃಷ್ಟಿ-10 ಹೆಸರಿನ ಡ್ರೋಣ್ ಗಳು ಜೂನ್ 18ರಂದು ಭಾರತೀಯ ಸೇನೆಗೆ ಸೇರಲಿವೆ. ಮೊದಲ ಡ್ರೋಣ್ ಜನವರಿಯಲ್ಲಿ ಭಾರತೀಯ ಸೇನೆಗೆ ಈಗಾಗಲೇ ಸೇರಿಸಲಾಗಿದೆ.
ಹೈದರಾಬಾದ್ ನಲ್ಲಿ ಜೂನ್ 18ರಂದು ಎರಡು ಡ್ರೋಣ್ ಗಳು ಭಾರತೀಯ ವಾಯುಪಡೆಗೆ ಸೇರ್ಪಡೆ ಆಗಲಿವೆ. ತುರ್ತು ಸಂದರ್ಭದಲ್ಲಿ ಡ್ರೋಣ್ ಗಳನ್ನು ಹೆಚ್ಚು ಖರೀದಿಸುವ ಅಧಿಕಾರವನ್ನು ಸೇನೆಗೆ ನೀಡಲಾಗಿದೆ.
ಮೊದಲ ಹಂತದಲ್ಲಿ ಬಟಿಂಡಾ ವಾಯುನೆಲೆಯಲ್ಲಿ ಡ್ರೋಣ್ ಗಳನ್ನು ನಿಯೋಜಿಸಲಾಗುತ್ತಿದೆ. ಇದರಿಂದ ಪಶ್ಚಿಮ ಪಾಕಿಸ್ತಾನ ಸಂಪೂರ್ಣ ಗಡಿಯ ಮೇಲೆ ನಿಗಾ ವಹಿಸಬಹುದಾಗಿದೆ.
ಈಗಾಗಲೇ ಭಾರತೀಯ ಸೇನೆ ಮಾರ್ಕ್ 1 ಮತ್ತು ಮಾರ್ಕ್ 2 ಹೆಸರಿನ ಡ್ರೋಣ್ ಗಳನ್ನು ಗಡಿಯಲ್ಲಿ ಬಳಸುತ್ತಿದೆ. ಇದೀಗ ಈ ಜಾಗಕ್ಕೆ ದೃಷ್ಟಿ-10 ಡ್ರೋಣ್ ಗಳು ಸೇರ್ಪಡೆಯಾಗಲಿವೆ.