ಪ್ರಧಾನಿ ನರೇಂದ್ರ ಮೋದಿ ಅವರ ತವರೂರಾದ ಗುಜರಾತ್ ನಲ್ಲಿ 5000 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
ದೆಹಲಿ ಮತ್ತು ಗುಜರಾತ್ ಪೊಲೀಸ್ ಜಂಟಿಯಾಗಿ ಅಂಕ್ಲೇಶ್ವರ್ ನಗರದ ಅವ್ಕಾರ್ ಡ್ರಗ್ಸ್ ಲಿಮಿಟೆಡ್ ಕಂಪನಿ ಕಟ್ಟಡದ ಮೇಲೆ ದಾಳಿ ನಡೆಸಿದ ವಿಶೇಷ ಡ್ರಗ್ಸ್ ನಿಗ್ರಹ ಘಟಕ ದಾಳಿ ನಡೆಸಿ ಬೃಹತ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದೆ.
ದೆಹಲಿಯಲ್ಲಿ ಇತ್ತೀಚೆಗೆ 700 ಕೆಜಿ ಮೌಲ್ಯದ 7000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದ ಬೆನ್ನು ಹತ್ತಿದ ದೆಹಲಿ ಮತ್ತು ಮತ್ತು ಗುಜರಾತ್ ಪೊಲೀಸರು ಜಂಟಿ ದಾಳಿ ನಡೆಸಿದ್ದು, 5000 ಕೋಟಿ ರೂ. ಮೌಲ್ಯದ 518 ಕೆಜಿ ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಲಾಗಿದೆ.
ಗುಜರಾತ್ ವಿಶೇಷ ಮಾದಕದ್ರವ್ಯ ನಿಗ್ರಹ ಪಡೆ ಇದುವರೆಗೂ 1289 ಕೆಜಿ ತೂಕದ 13000 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಲಾಗಿದೆ.