Wednesday, October 21, 2026
Google search engine
Homeರಾಜ್ಯಶಿವಮೊಗ್ಗ ದಸರಾದಲ್ಲಿ ದಿಕ್ಕಾಪಾಲಾಗಿ ಓಡಿದ ಆನೆ: ಧರೆಗುರುಳಿದ ಅಂಬಾರಿ!

ಶಿವಮೊಗ್ಗ ದಸರಾದಲ್ಲಿ ದಿಕ್ಕಾಪಾಲಾಗಿ ಓಡಿದ ಆನೆ: ಧರೆಗುರುಳಿದ ಅಂಬಾರಿ!

ಶಿವಮೊಗ್ಗ: ಜನದಟ್ಟಣೆ ಹಾಗೂ ಗದ್ಧಲದಿಂದ ಬೆಚ್ಚಿದ ಆನೆ ದಿಕ್ಕಾಪಾಲಾಗಿ ಓಡಿದ್ದರಿಂದ ಬೆಳ್ಳಿಯ ಅಂಬಾರಿ ಧರೆಗುರುಳಿದ ಘಟನೆ ವಿಜಯದಶಮಿಯಂದು ನಡೆದಿದೆ.

ದಸರಾ ಜಂಬೂ ಸವಾರಿಯ ವೇಳೆ ಅಂಬಾರಿಯನ್ನು ಹೊತ್ತುಕೊಂಡಿದ್ದ ಸೋಮಣ್ಣ ಆನೆಯು, ಜನಸಂದಣಿ ಮತ್ತು ಗದ್ದಲಕ್ಕೆ ಅಂಬಾರಿಯನ್ನು ಕೆಳಕ್ಕೆ ಬೀಳಿಸಿ ಗಾಬರಿ ಬಿದ್ದು ಓಡಿದ ಘಟನೆ ನಡೆದಿದೆ.

ಮೈಸೂರಿನಂತೆ ಶಿವಮೊಗ್ಗದಲ್ಲೂ ಸಹ ತಾಯಿ ಚಾಮುಂಡೇಶ್ವರಿಯ ಬೆಳ್ಳಿ ಮಂಟಪದ ಮೆರವಣಿಗೆ ನಡೆಯುತ್ತಿದೆ. ಸಕ್ರೆಬೈಲಿನ ಮೂರು ಆನೆಗಳನ್ನು ಜಂಬೂ ಸವಾರಿಗೆ ಸಿದ್ಧಗೊಳಿಸಲಾಗಿತ್ತು. ‌ನಗರದ ಕೋಟೆ ರಸ್ತೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಇಂದು ಬೆಳಗ್ಗೆಯಿಂದಲೇ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆಯವರು ಮೂರು ಆನೆಗಳಿಗೆ ಬಣ್ಣ ಹಚ್ಚಿ ಸಿಂಗಾರಗೊಳಿಸಿದ್ದರು.

ಮಧ್ಯಾಹ್ನ 2:30ಕ್ಕೆ ಶಿವಪ್ಪ ನಾಯಕ ಕೋಟೆ ಮುಂಭಾಗದಲ್ಲಿ ಬಂಜೂ ಸವಾರಿ ಪ್ರಾರಂಭವಾವಾಗಿತ್ತು. ಜಂಬೂ ಸವಾರಿಗೂ ಮುನ್ನ ನಂದಿ ಧ್ವಜ ಪೂಜೆ ನಡೆಸಿ, ಮೆರವಣಿಗೆಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಚಾಲನೆ ನೀಡಿದ್ದರು.

ಅಂಬಾರಿ ಹೊತ್ತು ಸಾಗುತ್ತಿದ್ದ ಆನೆ ಜನರ ಗದ್ಧಲದಿಂದ ಕಂಗೆಟ್ಟಿದ್ದು, ದಿಕ್ಕಾಪಾಲಾಗಿ ಓಡಿದೆ. ಮಾವುತ, ಅರಣ್ಯ ಸಿಬ್ಬಂದಿ ಆನೆಯನ್ನು ನಿಯಂತ್ರಿಸಲು ಪರದಾಟ ನಡೆಸಿದ್ದಾರೆ. ಈ ವೇಳೆ ಆನೆ ಕಾರು ಹಾಗೂ ಹಲವು ಬೈಕ್ ಗಳನ್ನು ತುಳಿದು ಹಾನಿ ಮಾಡಿದೆ. ಆದರೆ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.

ಇದೇ ವೇಳೆ ಸೋಮಣ್ಣ ಆನೆಯನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ಆನೆ ಕೂಡ ವಾಪಸ್ ಆಗಿದೆ. ಸೋಮಣ್ಣ ಆನೆಯನ್ನು ನಿಯಂತ್ರಿಸಲು ವಿಫಲರಾಗಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಸಾಗರ ಬದಲಿಗೆ ಸೋಮಣ್ಣ ಆಯ್ಕೆ

ಪ್ರತಿ ವರ್ಷ ತಾಯಿ ಚಾಮುಂಡೇಶ್ವರಿಯ ಅಂಬಾರಿಯನ್ನು ಸಾಗರ ಆನೆ ಹೊರುತ್ತಿತ್ತು.‌ ಆದರೆ, ಈ ಬಾರಿ ಸೋಮಣ್ಣ ಆನೆ ಅಂಬಾರಿಯನ್ನು ಹೊತ್ತಿತ್ತು. ಹಾಲಿ ಸಕ್ರೆಬೈಲಿನಿಂದ ಆಗಮಿಸಿದ್ದ ಸಾಗರ, ಸೋಮಣ್ಣ ಹಾಗೂ ಬಹದ್ದೂರ್ ಆನೆಗಳು ತಾಲೀಮು ನಡೆಸಿದ್ದವು. ನಿನ್ನೆ ಸಂಜೆಯಷ್ಟೇ ಅರಣ್ಯಾಧಿಕಾರಿಗಳು ಅಂಬಾರಿಯನ್ನು ಹೊರಲು ಸೋಮಣ್ಣ ಆಯ್ಕೆ ಮಾಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments