Wednesday, December 24, 2025
Google search engine
Homeಮನರಂಜನೆಯುದ್ಧಕ್ಕೆ ದೊಡ್ಡ ಪಡೆ ಸಿದ್ಧವಾಗಿದೆ: ಕಿಚ್ಚ ಸುದೀಪ್‌

ಯುದ್ಧಕ್ಕೆ ದೊಡ್ಡ ಪಡೆ ಸಿದ್ಧವಾಗಿದೆ: ಕಿಚ್ಚ ಸುದೀಪ್‌

ಡಿಸೆಂಬರ್‌ 25ರಂದು ಬಿಡುಗಡೆ ಆಗುತ್ತಿರುವ ಮಾರ್ಕ್‌ ಚಿತ್ರದ ವಿರುದ್ಧ ಯುದ್ಧಕ್ಕೆ ದೊಡ್ಡ ಪಡೆಯೇ ಸಿದ್ಧವಾಗಿದೆ. ನಾವು ಯುದ್ಧಕ್ಕೆ ಸಿದ್ಧವಾಗಿದ್ದೇವೆ ಎಂದು ನಟ ಕಿಚ್ಚ ಸುದೀಪ್‌ ಹೇಳಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಮಾರ್ಕ್‌ ಚಿತ್ರದ ಬಿಡುಗಡೆಯ ಪ್ರಮೋಷನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಿಂತು ಮಾತನಾಡಿದರೆ ಯಾರಿಗೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತದೆ ಎಂಬ ಕಾರಣಕ್ಕೆ ಇಲ್ಲಿ ಹೇಳುತ್ತಿದ್ದೇನೆ ಎಂದಿದ್ದಾರೆ.

ಜುಲೈನಲ್ಲಿ ನಾವು ಡಿಸೆಂಬರ್‌ ನಲ್ಲಿ ಸಿನಿಮಾ ಮೂಲಕ ಬಾಗಿಲು ತಟ್ಟಲಿದ್ದೇವೆ ಎಂದು ಹೇಳಿದ್ದೇವೆ. ಅದರಂತೆ ಡಿಸೆಂಬರ್‌ ೨೫ರಂದು ಮಾರ್ಕ್‌ ಚಿತ್ರದ ಮೂಲಕ ಬಾಗಿಲು ತಟ್ಟುತ್ತಿದ್ದೇವೆ. ಇದರ ವಿರುದ್ಧ ಹೊರಗೆ ಯುದ್ಧಕ್ಕೆ ದೊಡ್ಡ ಪಡೆ ಸಿದ್ಧವಾಗಿದೆ ಎಂದರು.

ಒಳ್ಳೆಯವರಾಗಿ ಇರಬೇಕು ಎಂಬ ಕಾರಣಕ್ಕೆ ನಾನು ಬಾಯಿ ಸೇರಿದಂತೆ ಎಲ್ಲವನ್ನೂ ಮುಚ್ಚಿಕೊಂಡು ಇದ್ದೆ. ಇದರಿಂದ ನನ್ನ ಅಭಿಮಾನಿಗಳು ಸಾಕಷ್ಟು ನೋವು ಅನುಭವಿಸಬೇಕಾಯಿತು. ಆದರೆ ಈಗ ಹೇಳುತ್ತಿದ್ದೇನೆ. ನಾವು ಯುದ್ಧಕ್ಕೆ ಸಿದ್ಧ. ಮಾತಿಗೆ ಬದ್ಧ. ಎಷ್ಟು ಸಹನೆಯಿಂದ ಇರಬೇಕೋ ಇರಿ. ಮಾತನಾಡುವ ಜಾಗದಲ್ಲಿ ಮಾತನಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments