ಬಾಲಿವುಡ್ ನಟಿ ಮಮತಾ ಕುಲಕರ್ಣಿ 25 ವರ್ಷಗಳ ನಂತರ ಭಾರತಕ್ಕೆ ಮರಳಿದ್ದು, ತಾಯ್ನಾಡಿಗೆ ಕಾಲಿಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೊತೆ ಕರಣ್ ಅರ್ಜುನ್ ಚಿತ್ರದಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಬೇಡಿಕೆಯ ಉತ್ತುಂಗದಲ್ಲಿ ಇದ್ದಾಗಲೇ ದಿಢೀರನೆ ಚಿತ್ರರಂಗ ತೊರೆದಿದ್ದ ಮಮತಾ ಕುಲಕರ್ಣಿ ಇದೀಗ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ.
2020ರಲ್ಲಿ ವಿದೇಶಕ್ಕೆ ಹಾರಿದ್ದ ಮಮತಾ ಕುಲಕರ್ಣಿ 25 ವರ್ಷಗಳ ನಂತರ ತಾಯ್ನಾಡಿಗೆ ಮರಳಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, 25 ವರ್ಷದ ನಂತರ ತಾಯ್ನಾಡಿಗೆ ಮರಳಿದ್ದೇನೆ ಎಂದಿದ್ಧಾರೆ.
2020ರಲ್ಲಿ ತಾಯ್ನಾಡು ತೊರೆದು ಹೋಗಿದ್ದೆ. 2012ರಲ್ಲಿ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಬಂದು ಹಾಗೆ ಹೋಗಿದ್ದೆ. ಈಗ ಮತ್ತೆ 2024ರಲ್ಲಿ ಮತ್ತೆ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿದ್ದೇನೆ.ಅಂದರೆ 25 ವರ್ಷಗಳ ನಂತರ ಭಾರತಕ್ಕೆ ಬಂದಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
1990ರಲ್ಲಿ ಕರಣ್ ಅರ್ಜುನ್, ಅಮಿರ್ ಖಾನ್ ಜೊತೆ ಬಾಜಿ ಜೊತೆ ನಟಿಸಿದ್ದರು. ಚಿತ್ರದಲ್ಲಿ ಬ್ಯುಸಿ ಇದ್ದಾಗಲೇ ದಿಢೀರನೆ ವಿದೇಶಕ್ಕೆ ತೆರಳಿದ್ದು, ಅಲ್ಲಿಯೇ ನೆಲೆಯೂರಿದ್ದಾರೆ.
2015ರಲ್ಲಿ ಪತ್ತೆಯಾದ 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ಸರಬರಾಜು ಪ್ರಕರಣದಲ್ಲಿ ಮಮತಾ ಕುಲಕರ್ಣಿ ಹೆಸರು ಕೇಳಿಬಂದಿತ್ತು. ಪತಿ ವಿಕ್ಕಿ ಗೋಸ್ವಾಮಿ ಜೊತೆಗೂಡಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬೀಳುತ್ತಿದ್ದಂತೆ ಮಮತಾ ಕುಲಕರ್ಣಿ ವಿದೇಶಕ್ಕೆ ಪರಾರಿಯಾಗಿದ್ದರು. ಆದರೆ ಈ ಆರೋಪವನ್ನು ಅಲ್ಲಗಳೆದಿದ್ದ ಮಮತಾ ಕುಲಕರ್ಣಿ ನನ್ನನ್ನು ಯಾರೂ ಬಂಧಿಸಿಲ್ಲ. ನಾನು ಯಾವುದೇ ಅಕ್ರಮ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.