ಯೂಟ್ಯೂಬರ್ ಧನರಾಜ್ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-11 ಮನೆಯಿಂದ ಹೊರಬಿದ್ದಿದ್ದಾರೆ.
ದಕ್ಷಿಣ ಕನ್ನಡ ಮೂಲದ ಧನರಾಜ್ ಭಾನುವಾರ ನಡೆದ ಸೂಪರ್ ಸಂಡೇಯಲ್ಲಿ ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಫಿನಾಲೆ ವಾರ ಪ್ರವೇಶಿಸುವಲ್ಲಿ ವಿಫಲವಾಗಿದ್ದಾರೆ.
ಧನರಾಜ್ ಟಾಸ್ಕ್ ವೇಳೆ ಮಾಡಿದ ಎಡವಟ್ಟಿನಿಂದ ಕಳೆದ ವಾರ ಮಿಡ್ ವೀಕ್ ಎಲಿಮಿನೇಷನ್ ರದ್ದುಗೊಳಿಸಲಾಗಿತ್ತು. ಅಲ್ಲದೇ ವೋಟಿಂಗ್ ಕೂಡ ಮಧ್ಯದಲ್ಲೇ ನಿಲ್ಲಿಸಲಾಗಿತ್ತು.
ಶನಿವಾರ ನಡೆದ ರದ್ದುಗೊಂಡಿದ್ದ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಗೌತಮ್ ಜಾಧವ್ ಹೊರಬಿದ್ದಿದ್ದರು. ಕೊನೆಯ ಮೂವರು ಸ್ಪರ್ಧಿಗಳಲ್ಲಿ ಉಳಿದುಕೊಂಡಿದ್ದ ಭವ್ಯಾ ಗೌಡ ಮತ್ತು ಧನರಾಜ್ ಇಬ್ಬರಲ್ಲಿ ಒಬ್ಬರು ಹೊರಬೀಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆಯಂತೆಯೇ ಧನರಾಜ್ ಹೊರಬಿದ್ದಿದ್ದಾರೆ.