Thursday, 19 November 2026 — Kannadavahini
BREAKING NEWS
ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್
ಮನರಂಜನೆ

ಗೇಮ್ ಚೇಂಜರ್, ಪುಷ್ಪಾ ನಿರ್ಮಾಪಕರಿಗೆ ಐಟಿ ಶಾಕ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 23 ವೀಕ್ಷಣೆಗಳು
game changer producer
game changer producer

ಹೈದರಾಬಾದ್: ಗೇಮ್ ಚೇಂಜರ್ ನಿರ್ಮಾಪಕ ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮ (ಎಫ್ಡಿಸಿ) ಅಧ್ಯಕ್ಷ ದಿಲ್ ರಾಜು ಹಾಗೂ ಪುಷ್ಪ ಸಿನೆಮಾದ ನಿರ್ಮಾಣ ಸಂಶ್ತೆ ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎರಡೂ ಸಿನಿಮಾಗಳಿಂದ ಗಳಿಕೆಯಾದ ಹಣ ಮತ್ತು ಐಟಿ ರಿಟರ್ನ್ಸ್ ನಡುವಿನ ವ್ಯತ್ಯಾಸಗಳ ಕುರಿತು ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ದಿಲ್ ರಾಜು ಮತ್ತು ಮೈತ್ರಿ ಮೂವಿ ಮೇಕರ್ಸ್ ಮುಖ್ಯಸ್ಥರಾದ ನವೀನ್ ಯೆರ್ನೇನಿ, ಯಲಮಂಚಿಲಿ ರವಿಶಂಕರ್ ಅವರಿಗೆ ಸಂಬಂಧಿಸಿದ 8ಕ್ಕೂ ಹೆಚ್ಚು ಸ್ಥಳಗಳನ್ನು ಪರಿಶೀಲಿಸಲು 55ಕ್ಕೂ ಹೆಚ್ಚಿನ ತಂಡಗಳನ್ನು ರಚಿಸಲಾಗಿದೆ.

ದಿಲ್ ರಾಜು, ನವೀನ್ ಯೆರ್ನೇನಿ, ರವಿಶಂಕರ್ ಮತ್ತು ಅವರ ಸಂಬಂಧಿಕರಿಗೆ ಸಂಬಂಧಿಸಿದ ಜುಬಿಲಿ ಹಿಲ್ಸ್ ಹಾಗೂ ಬಂಜಾರ ಹಿಲ್ಸ್ ನಲ್ಲಿರುವ ಆಸ್ತಿಪಾಸ್ತಿಗಳ ೇಲೆ ದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವರದಿಯಾದ ಹಣಕಾಸಿನ ವ್ಯತ್ಯಾಸಗಳ ಹಿನ್ನೆಲೆ, ದಿಲ್ ರಾಜು ಅವರ ಸಹೋದರ ಶಿರೀಶ್, ಮಗಳು ಹನ್ಶಿತಾ ರೆಡ್ಡಿ ಮತ್ತು ಇತರೆ ಸಂಬಂಧಿಕರ ತನಿಖೆಯೂ ನಡೆಯುತ್ತಿದೆ.

ಸಿನಿಮಾ ನಿರ್ಮಾಣ ವ್ಯವಹಾರ ಮಾತ್ರವಲ್ಲದೇ, ದಿಲ್ ರಾಜು ರಿಯಲ್ ಎಸ್ಟೇಟ್‌ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ತನಿಖೆಯ ಭಾಗವಾಗಿ ಅಧಿಕಾರಿಗಳು ಪ್ರತಿ ವಹಿವಾಟನ್ನೂ ಪರಿಶೀಲಿಸುತ್ತಿದ್ದಾರೆ.

ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನೇತೃತ್ವದ ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್‌ನ, ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ಚಿತ್ರದೊಂದಿಗೆ 2024ರಲ್ಲಿ ಭರ್ಜರಿ ಯಶಸ್ಸನ್ನು ಕಂಡಿದೆ.

400ರಿಂದ 500 ಕೋಟಿ ರೂ. ಬಜೆಟ್ಟಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವದಾದ್ಯಂತ ೧,೮೦೦ ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ಚಿತ್ರ ಗಳಿಸಿರುವ ಆದಾಯ ಮತ್ತು ಪಾವತಿಸಿದ ತೆರಿಗೆಯಲ್ಲಿ ವ್ಯತ್ಯಾಸವಿದ್ದು, ಇದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಹಾಗಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಐಟಿ ದಾಳಿ ಹಿಂದಿನ ಕಾರಣ ಅಸ್ಪಷ್ಟವಾಗಿದ್ದರೂ, ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಗಳ ಸಂಭವನೀಯ ಹಣಕಾಸಿನ ಅಕ್ರಮದ ಬಗ್ಗೆ ಸುಳಿವು ನೀಡಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8426 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment