ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ದಾಂಪತ್ಯಕ್ಕೆ ಬಿರುಕು ಉಂಟಾಗಿದ್ದು, ವಿಚ್ಛೇದನ ಸುದ್ದಿಯನ್ನು ಪತ್ನಿ ಸೈರಾ ಪತಿಯಿಂದ ದೂರ ಆಗುತ್ತಿರುವ ವಿಷಯವನ್ನು ಘೋಷಿಸಿದ್ದಾರೆ.
ಸೈರಾ ಪರ ವಕೀಲ ಮಂಗಳವಾರ ಅಧಿಕೃತವಾಗಿ ಈ ವಿಷಯ ಬಹಿರಂಗಪಡಿಸಿದ್ದು, ದಾಂಪತ್ಯ ಒತ್ತಡಗಳನ್ನು ತಡೆಯಲು ಆಗದ ಕಾರಣ ವಿಚ್ಛೇದನಕ್ಕೆ ಮುಂದಾಗುತ್ತಿದ್ದು, ಇದು ಜೀವನದ ಅತ್ಯಂತ ಕಠಿಣ ನಿರ್ಧಾರವಾಗಿದ್ದು, ಭಾವಾನಾತ್ಮಕವಾಗಿದೆ ಎಂದು ತಿಳಿಸಿದರು.
ವಿಚ್ಛೇದನ ಘೋಷಣೆ ಕಠಿಣವಾಗಿದ್ದು, ಈ ವಿಷಯದಲ್ಲಿ ಕುಟುಂಬದ ಖಾಸಗಿತನಕ್ಕೆ ಅವಕಾಶ ನೀಡಿ ಎಂದು ಸೈರಾ ಮನವಿ ಮಾಡಿದ್ದಾರೆ. ಆದರೆ ಈ ಎಆರ್ ರೆಹಮಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಎಆರ್ ರೆಹಮಾನ್ ಮತ್ತು ಸೈರಾ 1995ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಖಾತಿಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ.
ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ರೆಹಮಾನ್ ಇತ್ತೀಚೆಗೆ ರಾಯನ್ ಚಿತ್ರದಲ್ಲಿ ನೀಡಿದ್ದ ಹಾಡು ಸೂಪರ್ ಹಿಟ್ ಆಗಿದ್ದು, ಮುಂಬರುವ ಚಾವಾ, ಥಗ್ ಆಫ್ ಲೈಫ್, ಗಾಂಧಿ ಟಾಸ್ಕ್ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.