3
ಪಂದ್ಯದ ಕೊನೆಯ ನಿಮಿಷದಲ್ಲಿ ಸಿಡಿಸಿದ ಗೋಲಿನ ನೆರವಿನಿಂದ ಭಾರತ ವನಿತೆಯರ ತಂಡ 1-0 ಗೋಲಿನಿಂದ ಪ್ರಬಲ ಚೀನಾ ತಂಡದ ವಿರುದ್ಧ ರೋಚಕ ಜಯ ಸಾಧಿಸಿ ದಾಖಲೆ ಮೂರನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬಿಹಾರದ ರಾಜ್ಗೀರ್ ಮೈದಾನದಲ್ಲಿ ಬುಧವಾರ ನಡೆದ ಫೈನಲ್ ನಲ್ಲಿ ಭಾರತ ತಂಡ ದೀಪಾ ಮೂರನೇ ಕ್ವಾರ್ಟರ್ ನಲ್ಲಿ ಸಿಡಿಸಿದ ಏಕೈಕ ಗೋಲಿನಿಂದ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಭಾರತ ಮೂರು ಬಾರಿ ಗೆದ್ದ ದಕ್ಷಿಣ ಕೊರಿಯಾ ತಂಡದ ದಾಖಲೆಯನ್ನು ಸರಿಗಟ್ಟಿತು.