ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ 6 ಬಾರಿ ಇರಿದ ದಾಳಿಕೋರ ಸೈಫ್ 4 ವರ್ಷದ ಪುತ್ರನ ಕೊಣೆಗೆ ನುಗ್ಗಿ 1 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದ ಎಂಬ ಸ್ಫೋಟಕ ವಿಷಯವನ್ನು ಮನೆಯ ಸಿಬ್ಬಂದಿ ಬಹಿರಂಗಪಡಿಸಿದ್ದಾರೆ.
ಗುರುವಾರ ಮುಂಜಾನೆ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದ ದಾಳಿಕೋರ ಸೈಫ್ ಅಲಿ ಖಾನ್ ಗೆ 6 ಬಾರಿ ಇರಿದಿದ್ದು, ಮನೆಯಲ್ಲಿದ್ದ ನರ್ಸ್ ಹಾಗೂ ಮನೆಯ ಕೆಲಸದವರ ಮೇಲೂ ದಾಳಿ ಮಾಡಿ ಗಾಯಗೊಳಿಸಿದ್ದಾನೆ.
ಸೈಫ್ ಅಲಿ ಖಾನ್ ಮೊಣಕೈ, ಹೊಟ್ಟೆ, ಕುತ್ತಿಗೆ ಮುಂತಾದ 6 ಗಂಟೆ ಗಾಯವಾಗಿದ್ದು, 2 ಕಡೆ ಆಳವಾದ ಗಾಯಗಳಾಗಿವೆ. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿರುವ ಸೈಫ್ ಅಲಿ ಖಾನ್ ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿದೆ.
ಭಾಂದ್ರಾ ಪೂರ್ವದಲ್ಲಿರುವ 12 ಅಂತಸ್ತಿನ ಕಟ್ಟಡದೊಳಗೆ 4 ಮಹಡಿಗಳಿವೆ. ದಾಳಿಕೋರ ಮನೆಗೆ ನುಗ್ಗಿ 4 ವರ್ಷದ ಮಗು ಜಹಂಗೀರ್ ಕೊಣೆಗೆ ನುಗ್ಗಿ 1 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದ ಎಂದು ಮಗುವಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನರ್ಸ್ ಎಲಿಯಾಮಾ ಫಿಲಿಪ್ಸ್ ತಿಳಿಸಿದ್ದಾರೆ.
ನಾನು 4 ವರ್ಷದ ಮಗು ಜಹಂಗೀರ್ ನೋಡಿಕೊಂಡು ಮೊದಲ ಮಹಡಿಯಲ್ಲಿದ್ದೆ. ಮಧ್ಯರಾತ್ರಿ 2 ಗಂಟೆ ಆಗಿರಬೇಕು. ಆಗ ಬಾತ್ ರೂಮ್ ಬಾಗಿಲು ತೆರೆದಿದ್ದು, ಲೈಟ್ ಹಾಕಿತ್ತು. ಕರೀನಾ ಕಪೂರ್ ಎಲ್ಲಾ ಚೆಕ್ ಮಾಡಿಕೊಂಡು ಹೋಗುತ್ತಿರಬೇಕು ಎಂದು ಭಾವಿಸಿದೆ. ಸ್ವಲ್ಪ ಹೊತ್ತಿನಲ್ಲೇ ಬಾತ್ ರೂಮ್ ನಲ್ಲಿ ಲೈಟ್ ಆಫ್ ಆಗಿ ವ್ಯಕ್ತಿಯೊಬ್ಬ ಹೊರಗೆ ಬಂದ.
ನಾನು ಅನುಮಾನದಿಂದ ಯಾರು ಇರಬಹುದು ಎಂದು ಹೊರಗೆ ಬಂದಾಗ ಆತ ಜಹಂಗೀರ್ ಮಲಗಿದ್ದ ಕೊಣೆಗೆ ಹೋಗುತ್ತಿದ್ದ. ಕೂಡಲೇ ಯಾರು ನೀನು ಎಂದು ಕಿರುಚಿದೆ. ಆಗ ಆತ ನನ್ನ ಬಳಿ ಬಂದು ಶಬ್ಧ ಮಾಡಬೇಡ. 1 ಕೋಟಿ ರೂ. ಕೊಡುವಂತೆ ಹೇಳಿದ. ಆಗ ಆತನ ಜೊತೆ ಜಗಳ ಮಾಡಿದೆ.
ಅಷ್ಟರಲ್ಲಿ ಸೈಫ್ ಅಲಿ ಖಾನ್ ಬಂದು ಅವರು ಹೊಡೆದಾಟಕ್ಕೆ ಇಳಿದರು. ಜಗಳದಲ್ಲಿ ಆತ ಎಲ್ಲರ ಮೇಲೆ ಚಾಕು ಬೀಸಿದ. ಸೈಫ್ ಅಲಿಖಾನ್ ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರೂ ಬರುತ್ತಿದ್ದಂತೆ ಆತ ಪರಾರಿಯಾದ ಎಂದು ನರ್ಸ್ ಘಟನೆಯನ್ನು ವಿವರಿಸಿದ್ದಾರೆ.