ಬಾಲಿವುಡ್ ನಟ ಟಿಕು ಟಸ್ಲಾನಿಯಾಗೆ ಹೃದಯಾಘಾತವಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
೭೦ ವರ್ಷದ ಟಿಕು ಟಸ್ಲಾನಿಯಾ ಅಸ್ವಸ್ಥಗೊಂಡ ಕಾರಣ ಕೂಡಲೇ ಅವರನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ವರದಿಗೆ ನಿರೀಕ್ಷಿಸಲಾಗುತ್ತಿದೆ.
1984ರಲ್ಲಿ ಯೇ ಜೋ ಹೈ ಸಿಂಧಗಿ ಧಾರವಾಹಿ ಮೂಲಕ ಕಿರುತೆರೆಗೆ ಪಾದರ್ಪಣೆ ಮಾಡಿದ್ದ ಟಿಕು ಟಸ್ಲಾನಿಯಾ, ಪ್ಯಾರ್ ಕೆ ದೋ ಪಲ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದರ್ಪಣೆ ಮಾಡಿದ್ದರು.
ನಂತರ ಬೋಲ್ ರಾಧಾ ಬೋಲ್, ಕೂಲಿ ನಂ.1, ರಾಜಾ ಹಿಂದೂಸ್ತಾನಿ, ಹೀರೋ ನಂ.1, ಹಂಗಾಮಾ, ಬಡೇ ಮಿಯಾ, ಚೋಟೆ ಮಿಯಾ ಚಿತ್ರಗಳಲ್ಲಿ ಮಿಂಚಿದ್ದಾರೆ. ದೀಪ್ತಿ ಅವರನ್ನು ವಿವಾಹ ಆಗಿರುವ ಟಿಕುಗೆ ಇಬ್ಬರು ಮಕ್ಕಳಿದ್ದಾರೆ.