Friday, May 17, 2024
Google search engine
Homeತಾಜಾ ಸುದ್ದಿಹಾಲಿ ಸಂಸದ ಅನಂತ್ ಕುಮಾರ್ ಹೆಗ್ಡೆಗೆ ಕೈ ತಪ್ಪಿದ ಟಿಕೆಟ್, ಚಿಕ್ಕಬಳ್ಳಾಪುರದಿಂದ ಕೆ.ಸುಧಾಕರ್ ಗೆ ಕಣಕ್ಕೆ!

ಹಾಲಿ ಸಂಸದ ಅನಂತ್ ಕುಮಾರ್ ಹೆಗ್ಡೆಗೆ ಕೈ ತಪ್ಪಿದ ಟಿಕೆಟ್, ಚಿಕ್ಕಬಳ್ಳಾಪುರದಿಂದ ಕೆ.ಸುಧಾಕರ್ ಗೆ ಕಣಕ್ಕೆ!

ಲೋಕಸಭಾ ಚುನಾವಣೆಗೆ ಬಿಜೆಪಿ 5ನೇ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ.

ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಭಾನುವಾರ ಸಂಜೆ 5ನೇ ಪಟ್ಟಿ ಬಿಡುಗಡೆ ಮಾಡಿದ್ದು, ವಿವಾದಾತ್ಮಕ ಹೇಳಿಕೆ ಮೂಲಕ ಮುಜುಗರಕ್ಕೆ ಕಾರಣವಾಗಿದ್ದ ಹಾಲಿ ಸಂಸದ ಅನಂತ್ ಕುಮಾರ್ ಹೆಗ್ಡೆಗೆ ಟಿಕೆಟ್ ಕೈ ತಪ್ಪಿದೆ.

ರಾಯಚೂರಿನಿಂದ ರಾಜಾ ಅಮರೇಶ್ ನಾಯಕ್, ಉತ್ತರ ಕನ್ನಡ ವಿಶ್ವೇಶ್ವರ ಹೆಗಡೆ ಕಾಗೇರಿ, ಚಿಕ್ಕಬಳ್ಳಾಪುರದಿಂದ ಕೆ. ಸುಧಾಕರ್ ಹಾಗೂ ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡಲಾಗಿದೆ.

ರಾಜ್ಯದ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದಂತಾಗಿದ್ದು, ಬಿಜೆಪಿ ಚಿತ್ರದುರ್ಗ ಕ್ಷೇತ್ರವನ್ನು ಬಾಕಿ ಉಳಿಸಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments