Monday, May 11, 2026
Home ತಾಜಾ ಸುದ್ದಿ ಬಿಜೆಪಿ 5ನೇ ಅಭ್ಯರ್ಥಿ ಪಟ್ಟಿ ಪ್ರಕಟ: ನಟಿ ಕಂಗನಾ ರಾಣವತ್ ಗೆ ಟಿಕೆಟ್, ವರುಣ್ ಗಾಂಧಿಗೆ ಕೊಕ್!

ಬಿಜೆಪಿ 5ನೇ ಅಭ್ಯರ್ಥಿ ಪಟ್ಟಿ ಪ್ರಕಟ: ನಟಿ ಕಂಗನಾ ರಾಣವತ್ ಗೆ ಟಿಕೆಟ್, ವರುಣ್ ಗಾಂಧಿಗೆ ಕೊಕ್!

by Vahini
0 comments
kangana ranuath

ಬಾಲಿವುಡ್ ನಟಿ ಕಂಗನಾ ರಾಣವತ್ ಬಿಜೆಪಿ ಪ್ರಕಟಿಸಿದ ಲೋಕಸಭಾ ಅಭ್ಯರ್ಥಿಗಳ 5ನೇ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬಿಜೆಪಿ 5ನೇ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಿದ್ದು, ಹಿಂದುತ್ವದ ಕುರಿತು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ನಟಿ ಕಂಗನಾ ರಾಣವತ್ ಹಾಗೂ ಕಾಂಗ್ರೆಸ್ ತೊರೆದಿದ್ದ ಉದ್ಯಮಿ ನವೀನ್ ಜಿಂದಾಲ್ ಗೆ ಟಿಕೆಟ್ ನೀಡಲಾಗಿದೆ.

ಕಂಗನಾ ರಾಣವತ್ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ನವೀನ್ ಜಿಂದಾಲ್ ಹರಿಯಾಣದ ಕುರುಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದ ಹಾಲಿ ಸಂಸದ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ವರುಣ್ ಗಾಂಧಿ ಉತ್ತರ ಪ್ರದೇಶದ ಫಿಲಿಬಿಟ್ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಈ ಬಾರಿ ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign