ಹಾರ್ಲಿಕ್ಸ್ ಮೇಲಿನ `ಆರೋಗ್ಯ ಪಾನೀಯ’ ಹೆಸರನ್ನು ಹಿಂದೂಸ್ತಾನ್ ಯೂನಿಲಿವರ್ ಕಂಪನಿ ತೆಗೆದುಹಾಕಿದೆ. ಈ ಮೂಲಕ ಹಾರ್ಲಿಕ್ಸ್ ಆರೋಗ್ಯ ಪಾನೀಯವಾಗಿ ಇನ್ನು ಮುಂದೆ ಮಾರಾಟವಾಗುವುದಿಲ್ಲ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಬೂಸ್ಟ್ ಮುಂತಾದ ಉತ್ಪನ್ನಗಳನ್ನು ಆರೋಗ್ಯ ಪಾನೀಯ ಪಟ್ಟಿಯಿಂದ ಹೊರಗೆ ಇಡುವಂತೆ ಆನ್ ಲೈನ್ ಮಾರಾಟ ಸಂಸ್ಥೆಗಳಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಹಾರ್ಲಿಕ್ಸ್ ಉತ್ಪನ್ನ ತಯಾರಕ ಕಂಪನಿ ಹಿಂದೂಸ್ತಾನ್ ಯೂನಿ ಲಿವರ್ ಹಾರ್ಲಿಕ್ಸ್ ಬಾಟಲಿಗಳ ಮೇಲಿದ್ದ ಪಟ್ಟಿಯನ್ನು ಬದಲಾಯಿಸಿದೆ.
ಹಾರ್ಲಿಕ್ಸ್ ಬಾಟಲಿಗಳ ಮೇಲಿದ್ದ ಆರೋಗ್ಯ ಪಾನೀಯ ಎಂಬ ಹೆಸರಿನ ಬದಲು ಫಂಕ್ಷನಲ್ ನ್ಯೂಟ್ರಿಷನಲ್ ಡ್ರಿಂಕ್ಸ್ ಎಂದು ಹಾಕಲಾಗಿದೆ.