ಪ್ರತ್ಯೇಕ ರಾಜ್ಯಗಳಾಗಿ ವಿಭಜನೆ ಆಗಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶದ ಜಂಟಿ ರಾಜಧಾನಿಯಾಗಿದ್ದ ಹೈದರಾಬಾದ್ ಜೂನ್ 2ರಿಂದ ಆಂಧ್ರಪ್ರದೇಶದಿಂದ ಅಧಿಕೃತವಾಗಿ ವಿಭಜನೆಯಾಗಿದೆ.
ಆಂಧ್ರಪ್ರದೇಶದ ಮರುವಿಂಗಡಣೆ ಕಾಯ್ದೆ 2014ರ ಅನ್ವಯ ಜೂನ್ 2ರಿಂದ ಹೈದರಾಬಾದ್ ಮಹಾನಗರ ಪಾಲಿಕೆ ಅಧಿಕೃತವಾಗಿ ಆಂಧ್ರಪ್ರದೇಶ ಹಿಡಿತದಿಂದ ಹೊರಬಂದಿದ್ದು, ತೆಲಂಗಾಣಕ್ಕೆ ಸೇರ್ಪಡೆಯಾಗಿದೆ.
ಪ್ರತ್ಯೇಕ ರಾಜ್ಯಗಳಾಗಿ ವಿಂಗಡಣೆ ಮಾಡಿದಾಗ ಆಂಧ್ರಪ್ರದೇಶ ಮತ್ತು ತೆಲಂಗಾಣದ ಜಂಟಿ ರಾಜಧಾನಿಯಾಗಿ 10 ವರ್ಷಗಳ ಹೈದರಾಬಾದ್ ಮುಂದುವರಿಯಲಿದೆ ಎಂದು ನಿಯಮ ರೂಪಿಸಲಾಗಿತ್ತು.ಈ ಆದೇಶ 2024 ಜೂನ್ 2ಕ್ಕೆ ಅಂತ್ಯಗೊಂಡಿದೆ.