ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಭರ್ಜರಿಯಾಗಿ ಪುನರಾಗಮನ ಮಾಡಿದ ಭಾರತ ಹಾಕಿಪಟುಗಳು 2-1ರಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ.
ಶನಿವಾರ ನಡೆದ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಭಾರತದ ಆರಂಭದಲ್ಲೇ 0-1ರಿಂದ ಹಿನ್ನಡೆ ಅನುಭವಿಸಿತು. ಆದರೆ ತಿರುಗೇಟು ನೀಡಿದ ಭಾರತ ಸತತ 2 ಗೋಲು ಬಾರಿಸಿ ಮುನ್ನಡೆ ಸಾಧಿಸಿತು. ಪಂದ್ಯ ಮುಕ್ತಾಯಕ್ಕೆ ಕೇವಲ 10 ನಿಮಿಷಗಳಿದ್ದಾಗ ನ್ಯೂಜಿಲೆಂಡ್ ಮತ್ತೆ ಗೋಲು ದಾಖಲಿಸಿ ಸಮಬಲ ಸಾಧಿಸಿತು. ಆದರೆ ಕೊನೆಯ ಗಳಿಗೆಯಲ್ಲಿ ಗೋಲು ಸಿಡಿಸಿದ ಭಾರತ ರೋಚಕ ಜಯ ಸಾಧಿಸಿತು.
ಪಂದ್ಯದ ಆರಂಭದ 8ನೇ ನಿಮಿಷದಲ್ಲೇ ಗ್ರೇಗ್ ಫುಲ್ಟಾನ್ ಗೋಲು ಬಾರಿಸಿ ನ್ಯೂಜಿಲೆಂಡ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಭಾರತದ ಪರ ವಿಕಾಸ್ ಮತ್ತು ಮಂದೀಪ್ ಗೋಲು ಬಾರಿಸಿ ಗೆಲುವಿನ ರೂವಾರಿಗಳಾದರು.
ನಿಧಾನಗತಿ ಆರಂಭ ಪಡೆದ ಭಾರತದ ಆಟಗಾರರು ಚೇತರಿಸಿಕೊಂಡು ತಿರುಗೇಟು ನೀಡಿದರು. ಯಾವುದೇ ಹಂತದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಕೊನೆಯವರೆಗೂ ಹೋರಾಡಿ ಸತತ ದಾಳಿ ನಡೆಸಿ ಗೋಲು ಬಾರಿಸಿದರು.
ಭಾರತ ಒಲಿಂಪಿಕ್ಸ್ ನಲ್ಲಿ 5 ಚಿನ್ನ ಸೇರಿದಂತೆ 12 ಪದಕ ಗೆದ್ದ ಸಾಧನೆ ಮಾಡಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಪದಕ ಗೆಲ್ಲಲು ವಿಫಲವಾಗಿದೆ.