ಬಾಲಕಿಯರಿಂದ ವಯೋವೃದ್ಧರವರೆಗೆ ಸಾವಿರಾರು ಮಹಿಳೆಯರ ಬೆತ್ತಲೆ ಫೋಟೊವನ್ನು ಮೊಬೈಲ್ ನಲ್ಲಿ ಸಂಗ್ರಹಿಸಿದ್ದ ಭಾರತೀಯ ಮೂಲದ ವೈದ್ಯನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
40 ವರ್ಷದ ಭಾರತೀಯ ವೈದ್ಯ ಕಮೈರ್ ಅಜಾಜ್ ಬಳಿ ಸಾವಿರಾರು ಮಹಿಳೆಯರ ಬೆತ್ತಲೆ ಫೋಟೊ ಹಾಗೂ ವೀಡಿಯೋಗಳು ಪತ್ತೆಯಾಗಿದ್ದು, 10ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಗಳು ಕೇಳಿ ಬಂದಿವೆ.
ಅಮೆರಿಕದ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಒಂದು ಹಾರ್ಡ್ ಡಿಸ್ಕ್ ನಲ್ಲಿ 13 ಸಾವಿರಕ್ಕೂ ಹೆಚ್ಚು ಮಹಿಳೆಯ ಬೆತ್ತಲೆ ವೀಡಿಯೊಗಳು ಪತ್ತೆಯಾಗಿವೆ. ಕಳೆದ 6 ವರ್ಷಗಳಲ್ಲಿ ಈ ವೀಡಿಯೊ ಹಾಗೂ ಫೋಟೊಗಳನ್ನು ಸಂಗ್ರಹಿಸಿದ್ದಾನೆ ಎಂದು ತಿಳಿದು ಬಂದಿದೆ.
2011ರಲ್ಲಿ ಭಾರತದಿಂದ ವೀಸಾ ಪಡೆದ ಅಮೆರಿಕಕ್ಕೆ ಬಂದಿದ್ದ ಕಮೈರ್ ಅಜಾಜ್, ಮಿಚಿಗೆನ್ ಸಿನಿಯಾ ಗ್ರೇಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ನಂತರ ಡಾಸನ್ ನ ಅಲಂಬಾಗೆ ಸ್ಥಳಾಂತರಗೊಂಡಿದ್ದ. ಆದರೆ ನಂತರ 2018ಕ್ಕೆ ಮಿಚಿಗನ್ ಗೆ ಮರಳಿ ಬಂದಿದ್ದ.
ಮಿಚಿಗನ್ ಆಸ್ಪತ್ರೆ ಜೊತೆಗೆ ಹಲವಾರು ಆಸ್ಪತ್ರೆಗಳಲ್ಲಿ ಫಿಜಿಷಿಯನ್ ಆಗಿ ಪಾರ್ಟ್ ಟೈಮ್ ಆಗಿ ಕೆಲಸ ಮಾಡುತ್ತಿದ್ದ. ಈತ ತನ್ನ ಮನೆಯಲ್ಲಿ ಅಲ್ಲದೇ ಕೆಲಸ ಮಾಡುವ ಆಸ್ಪತ್ರೆಗಳ ಬಾತ್ ರೂಮ್, ಬಟ್ಟೆ ಬದಲಿಸುವ ಸ್ಥಳ ಸೇರಿದಂತೆ ಹಲವು ಕಡೆ ಕ್ಯಾಮರಾ ಇರಿಸಿ ಫೋಟೊ ಮತ್ತು ವೀಡಿಯೊ ಸಂಗ್ರಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷದ ಮಗುವಿನಿಂದ ಹಿಡಿದು ಮಹಿಳೆಯರು ಮಲಗಿದ್ದಾಗ ಹಾಗೂ ಪ್ರಜ್ಞೆ ಇಲ್ಲದ ವೇಳೆಯಲ್ಲಿ ಅವರ ಖಾಸಗಿ ಅಂಗಗಳನ್ನು ವೀಡಿಯೋದಲ್ಲಿ ಸಂಗ್ರಹಿಸುತ್ತಿದ್ದ. ಈ ವೀಡಿಯೊಗಳು ಹಾರ್ಡ್ ಡಿಸ್ಕ್ ನಲ್ಲಿ ಸಿಕ್ಕಿದ್ದರೂ ಇನ್ನೂ ಬಹಳಷ್ಟು ವೀಡಿಯೋಗಳನ್ನು ಕ್ಲೌಡ್ ಸ್ಟೋರೇಜ್ ನಲ್ಲಿ ಸಂಗ್ರಹಿಸಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದು. ಅವುಗಳನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಕಮೈರ್ ಅಜಾಜ್ ವಿರುದ್ಧ ಪತ್ನಿ ಅನೈತಿಕ ಸಂಬಂಧದ ಶಂಕೆ ಮೇಲೆ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ನಡೆಸಿದಾಗ ಈತನ ಮೇಲೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ. ಆದರೆ ಒಂದು ಬಾರಿ ಬಾಲಕಿಗೆ ಅವಾಚ್ಯವಾಗಿ ನಿಂದಿಸಿದ ದೂರು ಬಂದಿತ್ತು. ಇದಾದ ನಂತರ ಒಂದರ ಹಿಂದೆ ಒಂದರಂತೆ ಪ್ರಕರಣಗಳು ಬೆಳಕಿಗೆ ಬರತೊಡಗಿದವು ಎಂದು ಪೊಲೀಸರು ವಿವರಿಸಿದ್ದಾರೆ.