Wednesday, December 24, 2025
Google search engine
Homeವಿದೇಶ40 ನಿಮಿಷ ಕಾದು ಕುಳಿತ ನಂತರ ರಷ್ಯಾ ಅಧ್ಯಕ್ಷ ಪುಟಿನ್‌ ಕೋಣೆಗೆ ನುಗ್ಗಿದ ಪಾಕಿಸ್ತಾನ ಪ್ರಧಾನಿ!

40 ನಿಮಿಷ ಕಾದು ಕುಳಿತ ನಂತರ ರಷ್ಯಾ ಅಧ್ಯಕ್ಷ ಪುಟಿನ್‌ ಕೋಣೆಗೆ ನುಗ್ಗಿದ ಪಾಕಿಸ್ತಾನ ಪ್ರಧಾನಿ!

ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ 40 ನಿಮಿಷಗಳ ಕಾಲ ಕಾದ ನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಭೇಟಿ ಮಾಡಲು ಅವರ ಕೋಣೆಗೆ ನುಗ್ಗಿದ ನಾಟಕೀಯ ಘಟನೆ ಶುಕ್ರವಾರ ನಡೆದಿದೆ.

ಡಿಸೆಂಬರ್‌ 12 ರಂದು ಶಾಶ್ವತ ತಟಸ್ಥ ದೇಶವಾಗಿ ತುರ್ಕಮೆನಿಸ್ತಾನದ 30ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಈ ಘಟನೆ ನಡೆದಿದ್ದು, ಈ ಅನಿರೀಕ್ಷಿತ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

https://twitter.com/RT_India_news/status/1999448538510688567

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಬೇಕಿತ್ತು. ಇದಕ್ಕಾಗಿ ವಿದೇಶಾಂಗ ಸಚಿವ ಇಶ್ಕ್‌ ದರ್‌ ಜೊತೆ ಸುಮಾರು 40 ನಿಮಿಷ ಕಾದರೂ ಅವರ ಭೇಟಿಗೆ ಅವಕಾಶ ಸಿಗಲಿಲ್ಲ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜೊತೆ ದ್ವೀಪಕ್ಷೀಯ ಮಾತುಕತೆ ನಡೆಯಬೇಕಿತ್ತು. ಇದಕ್ಕಾಗಿ ಒಂದು ಕೋಣೆಯಲ್ಲಿ ಸುಮಾರು 40 ನಿಮಿಷ ಕಾದರು. ನಂತರ ತಾಳ್ಮೆ ಕಳೆದುಕೊಂಡು ಪಕ್ಕದ ಕೋಣೆಯಲ್ಲಿ ಪುಟಿನ್‌ ಮತ್ತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಜೊತೆ ನಡೆಯುತ್ತಿದ್ದ ಸಭೆಯ ಮಧ್ಯದಲ್ಲೇ ನುಗ್ಗಿದರು.

ರಷ್ಯಾ ಅಧ್ಯಕ್ಷರ ಸಭೆ ನಡೆಯುತ್ತಿದ್ದ ಜಾಗಕ್ಕೆ ಬಾಗಿಲು ತೆರೆದು ಮಧ್ಯಪ್ರದೇಶಿಸಿದರು. ಇದರಿಂದ ರಕ್ಷಣಾ ಸಿಬ್ಬಂದಿ ಬಾಗಿಲು ಮುಚ್ಚಿದರು. ಶೆಹಬಾಜ್‌ ಷರೀಫ್‌ ಮತ್ತು ಪುಟಿನ್‌ ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.

ಪುಟಿನ್‌ ಭಿಕ್ಷುಕರನ್ನು ಭೇಟಿ ಮಾಡಲು ಇಷ್ಟಪಡದೇ ಈ ರೀತಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಪ್ರತಿಕ್ರಿಯೆ ನೀಡಿದರೆ ಮತ್ತೊಬ್ಬ ಟ್ರಂಪ್‌ ಕೂಡ ಈ ಭೀಕ್ಷುಕರಿಗೆ ಇದೇ ರೀತಿ ಮಾಡಿದ್ದರು ಎಂದು ಹೇಳಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments