ಹಿಂದೂ ಧಾರ್ಮಿಕ ಸಂಸ್ಥೆಯಾದ ಇಸ್ಕಾನ್ ನಿಷೇಧಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬಾಂಗ್ಲಾದೇಶ ಹೈಕೋರ್ಟ್ ವಜಾಗೊಳಿಸಿದೆ.
ದೇಶದ್ರೋಹ ಆರೋಪದ ಮೇಲೆ ಹಿಂದೂ ಮುಖಂಡನ ಬಂಧನದ ವೇಳೆ ನಡೆದ ಘರ್ಷಣೆ ವೇಳೆ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.
ಇಸ್ಕಾನ್ ಮೂಲಭೂತ ತತ್ವಗಳ ಹಿಂದೂಗಳ ಸಂಘಟನೆಯಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಿ ವಕೀಲ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ದೇಶದಲ್ಲಿ ಇಸ್ಕಾನ್ ನಿಷೇಧ ಸಾಧ್ಯವಿಲ್ಲ ಎಂದು ಘೋಷಿಸಿತು.
ಅರ್ಜಿ ಸಲ್ಲಿಕೆಯಾದ ಬೆನ್ನಲ್ಲೇ ಬಾಂಗ್ಲಾದೇಶ ಹೈಕೋರ್ಟ್ ಇಸ್ಕಾನ್ ಇತ್ತೀಚೆಗೆ ನಡೆಸಿದ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡುವಂತೆ ಅಟಾರ್ನಿ ಜನರಲ್ ಗೆ ಸೂಚಿಸಿತ್ತು. ವರದಿ ಪರಿಶೀಲಿಸಿದ ನಂತರ ಬಾಂಗ್ಲಾಧೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.