Sunday, July 20, 2025
Google search engine
Homeರಾಜಕೀಯಬಾಯಿ ಮುಚ್ಕೊಂಡು ಇಲ್ಲದಿದ್ದರೆ ಎಲ್ಲ ಬಿಚ್ಚಿಡ್ತೀನಿ: ಸದಾನಂದ ಗೌಡರಿಗೆ ಯತ್ನಾಳ್ ಆವಾಜ್

ಬಾಯಿ ಮುಚ್ಕೊಂಡು ಇಲ್ಲದಿದ್ದರೆ ಎಲ್ಲ ಬಿಚ್ಚಿಡ್ತೀನಿ: ಸದಾನಂದ ಗೌಡರಿಗೆ ಯತ್ನಾಳ್ ಆವಾಜ್

ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು.ಇಲ್ಲದೆ ಹೋದರೆ ಅವರ ಬಂಡವಾಳ ಬಯಲು ಮಾಡ್ತೇನೆ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಎಚ್ಚರಿಸಿದ್ದಾರೆ.

ವಿಜಯಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದ ಗೌಡರು ಮಾತನಾಡಿರೋದನ್ನೆಲ್ಲ ಬಿಚ್ಚಿಡ್ತೀನಿ. ನನಗಿಂತ ಕೆಟ್ಟದಾಗಿ ಸದಾನಂದಗೌಡ ಮಾತನಾಡಿದ್ದಾರೆ ಎಂದರು.

ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ. ಸದಾನಂದಗೌಡ ಯಾಕೆ ಗಾಬರಿಯಾಗ ಬೇಕು? ಸದಾನಂದಗೌಡರು ಗಾಬರಿಯಾಗಬೇಡಿ ಎಂದು ಟಾಂಗ್ ಕೊಟ್ಟರು. ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ. ಅವರ ದೀಪ ಈಗಾಗಲೆ ಆರಿ ಹೋಗಿದೆ. ನಾನು ಯಾರು ಜೊತೆನೂ ಅಡ್ಜಸ್ಟಮೆಂಟ್ ಮಾಡಿಕೊಂಡಿಲ್ಲ ಎಂದು ಅವರು ಹೇಳಿದರು.

ನಾಗರಹಾವು-ಎರೆಹುಳ ಎತ್ತನಿಂದೆತ್ತ ಸಂಬಂಧವಯ್ಯ ಸದಾನಂದ. ನೀನು ಮಾತನಾಡಿದ ಕೃತಿಗೂ ನಿನ್ನ ನಾಲಿಗೆಗೂ ಎತ್ತನ ಸಂಬಂಧವಯ್ಯ ಸದಾನಂದ. ಇದು ನನ್ನ ಹೊಸ ವಚನ, ಇದು ನನ್ನ ಕೂಡಲ ಸಂಗಮ ಬಸವವಾಣಿ ಎಂದು ಟಾಂಗ್ ಕೊಟ್ಟರು. ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಡಿವಿಎಸ್ ಮಾತನಾಡಿದ್ದಾರೆ. ಇಲ್ಲ ಎನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments