ಲ್ಯಾಂಡಿಂಗ್ ವೇಳೆ ರನ್ ವೇಯಲ್ಲಿ ವಿಮಾನ ಸ್ಫೋಟಗೊಂಡ ಪರಿಣಾಮ ಪರಿಣಾಮ 179 ಮಂದಿ ಮೃತಪಟ್ಟಿರುವ ದಾರುಣ ಘಟನೆ ದಕ್ಷಿಣ ಕೊರಿಯಾದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ.
ಮುವಾನ್ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ 181 ಪ್ರಯಾಣಿಕರಿದ್ದ ಜೆಜು ಏರ್ ವಿಮಾನ ಲ್ಯಾಂಡಿಂಗ್ ವೇಳೆ ಬೆಂಕಿ ಕಾಣಿಸಿಕೊಂಡ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಬ್ಯಾಂಕಾಕ್ ನಿಂದ ಥಾಯ್ಲೆಂಡ್ ಮಾರ್ಗವಾಗಿ ಮರಳುತ್ತಿದ್ದ ಬೋಯಿಂಗ್ 737-800 ವಿಮಾನದಲ್ಲಿ 6 ಸಿಬ್ಬಂದಿ ಹಾಗೂ 175 ಪ್ರಯಾಣಿಕರು ಸೇರಿದಂತೆ 181 ಮಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಕಜಾಕಿಸ್ತಾನದಲ್ಲಿ ಅಜೆರ್‌ಬೈಜಾನ್ ಏರ್‌ಲೈನ್ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ದುರಂತ ವರದಿಯಾಗಿದೆ.
ಇಬ್ಬರು ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ವಿಮಾನದಲ್ಲಿ ಉಳಿದೆಲ್ಲರೂ ಮೃತಪಟ್ಟಿರುವ ಸಾಧ್ಯತೆ ಇದೆ. ದುರಂತದಲ್ಲಿ ವಿಮಾನ ಸಂಪೂರ್ಣ ಧ್ವಂಸವಾಗಿದ್ದು, ಬದುಕುಳಿದ ಪ್ರಯಾಣಿಕರ ಪತ್ತೆ ಹಾಗೂ ರಕ್ಷಣಾ ಕಾರ್ಯ ಭರದಿಂದ ನಡೆದಿದೆ.