ಮಿನಿ ವಿಮಾನವನ್ನು ಅಪಹರಿಸಲು ಯತ್ನಿಸಿದ ದುಷ್ಕರ್ಮಿಯನ್ನು ಸಹ ಪ್ರಯಾಣಿಕ ಗುಂಡು ಹಾರಿಸಿ ಕೊಂದ ಘಟನೆ ಅಮೆರಿಕದ ಬೆಲ್ಫೋನ್ ನ ಬೆಲಜಿಯಲ್ಲಿ ನಡೆದಿದೆ.
ಚಾಕು ವೆಲ್ಡಿಂಗ್ ಮಾಡುವ ಅಮೆರಿಕದ 49 ವರ್ಷದ ಅಕಿನ್ಯೆಯಲಾ ಸಾವಾ ಟೇಲರ್ ಮೂವರಿಗೆ ಇರಿದು ಗಾಯಗೊಳಿಸಿ ವಿಮಾನ ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಸಮಯಪ್ರಜ್ಞೆ ತೋರಿದ ಸಹ ಪ್ರಯಾಣಿಕನೊಬ್ಬ ಗುಂಡು ಹಾರಿಸಿದ್ದಾನೆ. ಇದರಿಂದ ಅಪಹರಣಕಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಯಾನ್ ಪೆಡ್ರೋ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಹಾರಾಟದ ವೇಳೆ ಈ ಘಟನೆ ನಡೆದಿದೆ. ಅಪಹರಣಕಾರ ವಿಮಾನದೊಳಗೆ ಹೇಗೆ ಚಾಕು ತಂದಿದ್ದ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಘಟನೆಯ ವಿವರಗಳು ಇನ್ನೂ ಲಭ್ಯವಾಗಿಲ್ಲ. ಆದರೆ ಸಮಯಪ್ರಜ್ಞೆ ತೋರಿದ ಸಹ ಪ್ರಯಾಣಿಕ ಹೀರೋ ಆಗಿದ್ದಾರೆ. ವಿಮಾನ ಅಪಹರಣ ಯತ್ನ ತಡೆದಿದ್ದಾನೆ ವಿಮಾನದ ಅಧಿಕಾರಿಗಳು ಶ್ಲಾಘಿಸಿದ್ದಾರೆ.


