ನಾಯಕ ಕೆಎಲ್ ರಾಹುಲ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಕೈಬಿಡಲಾಗಿದ್ದು, ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಾಗಿಲು ತೆರೆದಂತಾಗಿದೆ.
2025ರ ಐಪಿಎಲ್ ಹರಾಜಿಗೆ ಲಕ್ನೋ ಸೂಪರ್ ಜೈಂಟ್ಸ್ ಸಿದ್ಧವಾಗಿದ್ದು, ತಂಡದಲ್ಲಿ ಉಳಿಸಿಕೊಂಡ 5 ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ.
ನಿಕೊಲಸ್ ಪೂರನ್, ಮಯಾಂಕ್ ಯಾದವ್ ಮತ್ತು ರವಿ ಬಿಶ್ನೋಯಿ ಅವರನ್ನು ಉಳಿಸಿಕೊಳ್ಳಲಾಗಿದ್ದು, ಮೊಹಸಿನ್ ಖಾನ್ ಮತ್ತು ಆಯುಷ್ ಬದೋನಿ ಅವರನ್ನು ಕೂಡ ಉಳಿಸಿಕೊಳ್ಳುವ ಸಾಧ್ಯತೆ ಇದ್ದ, 5 ಆಟಗಾರರನ್ನು ಉಳಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಜೊತೆಗೆ ತಂಡದ ಭಿನ್ನಾಭಿಪ್ರಾಯ ಬಹಿರಂಗಗೊಂಡ ನಂತರ ಹೊರಬೀಳಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ ಸ್ವತಃ ರಾಹುಲ್ ಕೂಡ ತಂಡದಲ್ಲಿ ಮುಂದುವರಿಯಲು ಆಸಕ್ತಿ ವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಗೂ ಅಧಿಕೃತವಾಗಿ ರಾಹುಲ್ ಹೊರಬಂದಿದ್ದಾರೆ.
ಕೆಎಲ್ ರಾಹುಲ್ ಆರ್ ಸಿಬಿ ತಂಡಕ್ಕೆ ಬರಬೇಕು. ಬೆಂಗಳೂರಿನ ತಂಡಕ್ಕೆ ಕನ್ನಡಿಗನ ಅವಶ್ಯಕತೆ ಇದೆ ಎಂದು ಅಭಿಮಾನಿಗಳ ಹಾರೈಕೆಯಾಗಿದೆ. ಆರ್ ಸಿಬಿ ಹಾಗೂ ತಂಡದ ಪರ ವಿರಾಟ್ ಕೊಹ್ಲಿ, ರಾಹುಲ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದು ಆಗಿದೆ. ಆದರೆ ಇದೀಗ ರಾಹುಲ್ ಹರಾಜಿಗೆ ಬರುತ್ತಾರಾ ಅಥವಾ ನೇರವಾಗಿ ಆರ್ ಸಿಬಿಗೆ ಬರುತ್ತಾರಾ ಎಂಬುದು ಕಾದು ನೋಡಬೇಕಾಗಿದೆ.