ಲೆಬೆನಾನ್ ನಲ್ಲಿರುವ ವಿಶ್ವಸಂಸ್ಥೆಯ `ಬ್ಲೂ ಹೆಲ್ಮೇಟ್’ ನೆಲೆಯ ಮೇಲೆ ಇಸ್ರೇಲ್ ರಕ್ಷಣಾ ಪಡೆಯ ಟ್ಯಾಂಕರ್ ಗಳು ಬಾಂಬ್ ದಾಳಿ ನಡೆಸಿದ್ದು, ಶಾಂತಿಧೂತರಿಗೆ ಗಾಯಗಳಾಗಿವೆ.
ದಕ್ಷಿಣ ಲೆಬೆನಾನ್ ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಬಳಿ ಹೆಜಾಬುಲ್ಲಾ ಉಗ್ರರ ಮೇಲೆ ದಾಳಿ ನಡೆಸುವಾಗ ವಿಶ್ವಸಂಸ್ಥೆ ನೆಲೆ ಮೇಲೆ ಬಾಂಬ್ ಬಿದ್ದಿರುವುದನ್ನು ಸ್ವತಃ ಇಸ್ರೇಲ್ ಕೂಡ ಒಪ್ಪಿಕೊಂಡಿದೆ. ವಿಶ್ವಸಂಸ್ಥೆಯ ಮೇಲೆ ನಡೆದ ದಾಳಿಯನ್ನು ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ನಾಯಕರು ಖಂಡಿಸಿದ್ದಾರೆ.
ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ ನಂತರವೂ ಇಸ್ರೇಲ್ ಯುದ್ಧದ ಅಪರಾಧಗಳನ್ನು ಮುಂದುವರಿಸಿದೆ ಎಂದು ಶಾಂತಿ ಮಾತುಕತೆಗೆ ಪ್ರಯತ್ನಿಸುತ್ತಿರುವ ವಿಶ್ವಸಂಸ್ಥೆ ಆರೋಪಿಸಿದೆ. ಇದೇ ವೇಳೆ ಈ ದಾಳಿ ಅತ್ಯಂತ ಗಂಭೀರವಾದುದು ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆ ಲೆಬೆನಾನ್ ನಲ್ಲಿ ಸುರಕ್ಷತೆ ಕಾರ್ಯಗಳಿಗೆ ಹಾಗೂ ಶಾಂತಿ ಸಂಧಾನಕ್ಕಾಗಿ 10 ಸಾವಿರ ಸ್ವಯಂಸೇವಕರನ್ನು ನಿಯೋಜಿಸಿದೆ. ಐಡಿಎಫ್ ಮಾಯಾಂಕ್ ಟ್ಯಾಂಕ್ ಮೂಲಕ ನಡೆದ ದಾಳಿಯಲ್ಲಿ ಇಬ್ಬರಿಗೆ ಗಾಯವಾಗಿದೆ. ಗಂಭೀರ ಗಾಯವಾಗದೇ ಇದ್ದರೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.