ಮಹತ್ವಾಕಾಂಕ್ಷಿ ಗಗನಯಾನಕ್ಕೆ ಡಿಸೆಂಬರ್ ನಲ್ಲಿ ಚಾಲನೆ ನೀಡುವ ಗುರಿ ಹೊಂದಲಾಗಿದೆ ಎಂದು ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೊ) ಮುಖ್ಯಸ್ಥ ಎಸ್. ಸೋಮನಾಥ್ ಹೇಳಿದ್ದಾರೆ.
ತಮಿಳುನಾಡಿನ ತ್ರಿವೆಂಡ್ರಮ್ ನಲ್ಲಿರುವ ನೂತನ ಸತೀಶ್ ಧವನ್ ಬಾಹ್ಯಕಾಶ ಕೇಂದ್ರವನ್ನು ಗಗನಯಾತ್ರೆಗೆ ಗಗನಯಾತ್ರಿಗಳನ್ನು ಹೊತ್ತೊಯ್ಯುವ ನೌಕೆಯ ಪ್ರಮುಖ ತಂತ್ರಜ್ಞಾನ ತಲುಪಿದೆ.
ಗಗನಯಾನದ ಮೊದಲ ಹಂತವಾದ ಮಾನವರಹಿತ ನೌಕೆಯ ಉಡಾವಣೆ ಕಾರ್ಯಕ್ರಮವನ್ನು ಜಿ1 ಎಂದು ಹೆಸರಿಸಲಾಗಿದೆ. ಎಲ್-1 ಸಿ32 ಸ್ಟೇಜ್ ಸೇರಿದಂತೆ 200 ಡಾಲರ್ ಸಿದ್ಧತೆ ಭರದಿಂದ ಸಾಗಿದೆ ಎಂದು ಅವರು ಹೇಳಿದರು.
ಮಾನವರನ್ನು ಹೊತ್ತೊಯ್ಯುವ ನೌಕೆ ಮತ್ತು ನೌಕೆಯಿಂದ ತುರ್ತು ಸಂದರ್ಭದಲ್ಲಿ ಗಗನಯಾತ್ರಿಗಳು ಹೊರಬರುವ ಸಾಧನ ಸತೀಶ್ ಧವನ್ ಉಡಾವಣಾ ಕೇಂದ್ರವನ್ನು ತಲುಪಿವೆ. ಮೂರು ಮತ್ತು ನಾಲ್ಕನೇ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಅವರು ವಿವರಿಸಿದರು.