ಅಹಮಾದಾಬಾದ್ ನಲ್ಲಿ ಸಂಭವಿಸಿದ ವಿಮಾನ ದುರಂತದ ಬೆನಲ್ಲೆ ಹಲವು ದುರಂತಗಳು ಸಂಭವಿಸಿದರೆ, ಇನ್ನು ಕೆಲವು ದುರಂತಗಳು ಕೂದಲೆಳೆ ಅಂತರದಿಂದ ತಪ್ಪಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂತಹ ಘಟನೆಗಳು ಜುಲೈ 28 ರವರೆಗೆ ನಡೆಯುವ ಸಾಧ್ಯತೆ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಯುದ್ಧ ದೇವತೆ ಎಂದೇ ಕರೆಯಲಾಗುವ ಕುಜನನ್ನು ರಾಹು ನೋಡುತ್ತಿರುವುದರಿಂದ ಜುಲೈ ಅಂತ್ಯದವರೆಗೂ ಕುಜ ಹಾಗೂ ರಾಹು ಪ್ರಭಾವದಿಂದ ಈ ದುರಂತಗಳು ಸಂಭವಿಸುವ ಸಾಧ್ಯತೆ ಹೆಚ್ಚಿಸಿದೆ. ಇದರಿಂದ ಜುಲೈ 28ರವರೆಗೆ ಜಗತ್ತಿನಲ್ಲಿ ಅಪಘಾತಗಳು, ದುರಂತಗಳು, ಹಿಂಸಾಚಾರ, ಯುದ್ಧ ಮುಂತಾದ ಅಹಿತಕರ ಘಟನೆಗಳು ಸಂಭವಿಸುತ್ತವೆ.
ರಾಹುಗೆ ಕುಜ ಮತ್ತು ಕೇತು ದೃಷ್ಟಿ ಬಿದ್ದಿದೆ. ಇದರಿಂದ ಶತ್ರು ಗ್ರಹಗಳ ಮೇಲೆ ಕುಜ ಸಂಚಾರ ಮಾಡಿದಾಗ ಈ ರೀತಿಯ ಸಾಮೂಹಿಕ ಸಾವುಗಳು ಆಗುವಂತಹ ಪ್ರವಾಹ, ದುರಂತ, ಅಪಘಾತ, ಯುದ್ಧ ಮುಂತಾದ ಅಹಿತಕರ ಘಟನೆಗಳು ನಡೆಯುತ್ತವೆ.
ಅಗ್ನಿ ರಾಶಿಯಾದ ಸಿಂಹರಾಶಿಯಲ್ಲಿ ಕುಜ-ಕೇತು ಕುಳಿದ್ದಾಗ ಹಾಗೂ ರಾಹು-ಶನಿ ಜೊತೆಯಾಗಿದ್ದಾಗ ದುರಂತಗಳು ಸಂಭವಿಸಲಿದ್ದು, ಆಕಾಶದಲ್ಲಿ ಅಂದರೆ ವಿಮಾನ, ಹೆಲಿಕಾಫ್ಟರ್ ದುರಂತಗಳು ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇರುತ್ತದೆ. ಅದರಲ್ಲೂ ಇಂತಹ ಸಂದರ್ಭದಲ್ಲಿ ಜನ್ಮ ಜಾತಕದಲ್ಲಿ ರಾಹು ದೆಶೆ ನಡೆಯುತ್ತಿರುವರಿಗೆ ಕಂಟಕ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.
ಪ್ರಾಣಿ ಭಯ, ಅಗ್ನಿ ಆಕಸ್ಮಿಕ ಮುಂತಾದ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದೂರ ಪ್ರಯಾಣ, ಕತ್ತಲಲ್ಲಿ ಏಕಾಂಗಿಯಾಗಿ ಸಂಚರಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿದರೆ ಒಳ್ಳೆಯದು.
ಜೂನ್ 25ರ ನಂತರವೂ ಸಿಂಹ ರಾಶಿಯಲ್ಲಿಯೇ ಕೇತು ಇರುವುದರಿಂದ ಅನಿಶ್ಚಿತತೆ, ಅಶುಭ ಘಟನೆಗಳು ಮುಂದುವರಿಯಲಿವೆ. ಆದರೆ ಇದರ ಕ್ಷಿಣತೆ ಕಡಿಮೆ ಆಗುವುದರಿಂದ ಸಂಧಾನ, ರಾಜೀ ಮೂಲಕ ಪ್ರಭಾವ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಎಂ.ಆರ್. ಸವಿತಾ ಜ್ಯೋತಿಷಿ, ಮೈಸೂರು


