Thursday, December 25, 2025
Google search engine
Homeರಾಜ್ಯ15 ಮಂದಿ ಡಿವೈಎಸ್‌ಪಿ 16 ಮಂದಿ ಇನ್‌ಸ್ಪೆಕ್ಟರ್ ವರ್ಗಾವಣೆ

15 ಮಂದಿ ಡಿವೈಎಸ್‌ಪಿ 16 ಮಂದಿ ಇನ್‌ಸ್ಪೆಕ್ಟರ್ ವರ್ಗಾವಣೆ

ಬೆಂಗಳೂರು:ರಾಜ್ಯ ಪೋಲಿಸ್ ಇಲಾಖೆಯ 15 ಮಂದಿ ಡಿವೈಎಸ್ ಪಿ,16 ಮಂದಿ ಇನ್‌ಸ್ಪೆಕ್ಟರ್ (ಸಿಎಲ್) ರವರುಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಡಿವೈಎಸ್‌ಪಿಗಳು:

ಶಾಂತವೀರ-ರಾಯಚೂರು ಉಪವಿಭಾಗ, ರವಿನಾಥ ಡಿ. ಹರಿಜನ -ಸಿಐಡಿ, ಸುರೇಶ್ -ಬಳ್ಳಾರಿ ಗ್ರಾಮಾಂತರ ಸಿರಗುಪ್ಪ ಉಪ ವಿಭಾಗ, ನವೀನ್ ಕುಲಕರ್ಣಿ-ಬೆಂಗಳೂರು ನಗರ ಟಿಟಿಐ, ಶ್ರೀನಿವಾಸ ರೆಡ್ಡಿ-ಪ್ರಧಾನ ಕಚೇರಿ, ಮಾದಪ್ಪ-ಸಿಐಡಿಯಿಂದ ರಾಜ್ಯ ಗುಪ್ತವಾರ್ತೆ, ಲಕ್ಷ್ಮಿನಾರಾಯಣ-ಪ್ರಧಾನ ಕಚೇರಿ, ಗಿರಿಮಲ್ಲ ತಳಕಟ್ಟಿ-ಪ್ರಧಾನ ಕಚೇರಿ ಹಾಗೂ ಬಸವರಾಜ್ ಅವರನ್ನು ಆಂತರಿಕ ಭದ್ರತಾ ವಿಭಾಗದಲ್ಲಿಯೇ ಮುಂದುವರೆಸಲಾಗಿದೆ.

ರವಿಕುಮಾರ್-ಬೆಂಗಳೂರುನಗರ ಸಿಟಿಎಸ್‌ಬಿ, ಪರಶುರಾಮಪ್ಪ, ಗಜೇಂದ್ರ ಪ್ರಸಾದ್-ವಿವಿಐಪಿ ಭದ್ರತೆ, ಶರಣಪ್ಪ-ಟಿಟಿಐ ನಿಂದ ರಾಜ್ಯ ಗುಪ್ತವಾರ್ತೆ ಮತ್ತು ವೆಂಕಟೇಶ್ ಅವರನ್ನು ಬಳ್ಳಾರಿ ಜಿಲ್ಲೆ ಸಿರಗುಪ್ಪ ಉಪ ವಿಭಾಗದಿಂದ ಸಿಐಡಿಗೆ ವರ್ಗಾಯಿಸಲಾಗಿದೆ.

ಇನ್ಸ್‌ಪೆಕ್ಟರ್ ಗಳು:

ಲಕ್ಷ್ಮೀಕಾಂತ್ ಮೈಸೂರು ಹೆಬ್ಬಾಳ ಪೊಲೀಸ್ ಠಾಣೆ, ದಿನೇಶ್‌ಕುಮಾರ್ – ತುಮಕೂರಿನಿಂದ ಕೊಡಗಿನ ಕುಶಾಲನಗರ ವೃತ್ತ, ಮೋಹನ್‌ರೆಡ್ಡಿ-ಕರ್ನಾಟಕ ಲೋಕಾಯುಕ್ತದಿಂದ ಹಾಸನ ಆಲೂರು ಪೊಲೀಸ್‌ ಠಾಣೆ, ಚಿಕ್ಕರಾಜಶೆಟ್ಟಿ – ಚಾಮರಾಜನಗರ ಗ್ರಾಮಾಂತರದಿಂದ ರಾಮಾಪುರ ಪೊಲೀಸ್ ಠಾಣೆಗೆ ವರ್ಗಾಹಿಸಲಾಗಿದೆ.

ಸತೀಶ-ಚಿಕ್ಕಮಗಳೂರು ಬಸವನಹಳ್ಳಿ ವೃತ್ತದಿಂದ ಮಹಿಳಾ ಪೊಲೀಸ್ ಠಾಣೆ, ಶೇಷಾದ್ರಿ- ಚಾಮರಾಜನಗರ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಿಂದ ಗ್ರಾಮಾಂತರ ಠಾಣೆಗೆ, ಶ್ರೀಕಾಂತ್-ಮಂಡ್ಯ ಡಿಸಿಆರ್‌ಬಿ, ಲಕ್ಷಯ್ಯ, ರಾಮಚಂದ್ರಪ್ಪ, ಸತೀಶ್, ಪ್ರಕಾಶ್, ಬಿ.ಜೆ ಸತೀಶ್, ಕುಮಾರ್, ಸಂತೋಷ್ ಎಂ ಪಾಟೀಲ್, ಸಂಜೀವ ರಾಯಪ್ಪ ಹಾಗೂ ಮಂಜುನಾಥ್ ಅವರುಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments