ಚಾಮರಾಜಪೇಟೆಯ ಕೊಳ್ಳೆಗಾಲದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 5 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದ್ದಾರೆ.
ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಡಾಬಿ.ಟಿ. ಕವಿತಾ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ಸಮೀಪ ಶನಿವಾರ ಬೆಳಿಗ್ಗೆ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದದ 5 ಮಂದಿ ಅಸುನೀಗಿದ್ದಾರೆ ಎಂದರು.
ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಉರುಳಿಬಿದ್ದಿದ್ದೆ. ಮಂಡ್ಯದ ನಿವಾಸಿಗಳಾಗಿದ್ದರೆ ಶ್ರೀಲಕ್ಷ್ಮೀ ಕೊಳ್ಳೆಗಾಲದ ಕೆಂಪನಹಳ್ಳಿ ನಿವಾಸಿ ಆಗಿದ್ದಾರೆ.
4 ಮಂದಿ ಮೈಸೂರಿನ ಎಂಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಬ್ಬರು ಡಿಪ್ಲಮೋ ವಿದ್ಯಾರ್ಥಿ. ಟಿಪ್ಪರ್ ಚಾಲಕ ಅಪಘಾತ ಆಗುತ್ತಿದ್ದಂತೆ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಅವರು ವಿವರಿಸಿದ್ದಾರೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಶ್ರೀಲಕ್ಷ್ಮೀ ಪೋಷಕರು ಮೈಸೂರಿನಲ್ಲಿ ಮನೆ ಮಾಡಿದ್ದರು. ಶಿವರಾತ್ರಿ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದ ಜಾತ್ರೆಗೆ ಕಾರಿನಲ್ಲಿ ವಿದ್ಯಾರ್ಥಿಗಳು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಕವಿತಾ ವಿವರಿಸಿದ್ದಾರೆ.


