Thursday, December 25, 2025
Google search engine
Homeರಾಜ್ಯಜೈಲುವಾಸಿ ಪ್ರಜ್ವಲ್‌ ರೇವಣ್ಣಗೆ 8 ಗಂಟೆ ಕೆಲಸ, 524 ರೂ. ಸಂಬಳ!

ಜೈಲುವಾಸಿ ಪ್ರಜ್ವಲ್‌ ರೇವಣ್ಣಗೆ 8 ಗಂಟೆ ಕೆಲಸ, 524 ರೂ. ಸಂಬಳ!

ಮಾಜಿ ಪ್ರಧಾನಿಯ ಮೊಮ್ಮಗ, ಮಾಜಿ ಸಚಿವರ ಮಗ, ಮಾಜಿ ಸಿಎಂ ಚಿಕ್ಕಪ್ಪ.. ಸಣ್ಣ ವಯಸ್ಸಿನಲ್ಲಿಯೇ ಸತತ ಎರಡು ಬಾರಿ ಸಂಸದ ಸ್ಥಾನ.. ಭೇಟಿ ಮಾಡಲಯು ಬಂದವರಿಗೆ ಖರ್ಚಿಗೆ ಅಂತ 500, 1000 ರೂ. ಕೈಗಿಡುತ್ತಿದ್ದ… ಹೀಗೆ ಐಷಾರಾಮಿ ಜೀವನ ಮಾಡುತ್ತಿದ್ದ ಪ್ರಜ್ವಲ್‌ ರೇವಣ್ಣ ಈಗ ಖಾಯಂ ಜೈಲುವಾಸಿ.

ಮೈಸೂರು ಜಿಲ್ಲೆಯ ಕೆಆರ್‌ ನಗರದಲ್ಲಿ ಕೆಲಸದಾಕೆ ಮೇಲೆ ನಿರಂತರ ಅತ್ಯಾಚಾರ ಹಾಗೂ ಬ್ಲಾಕ್‌ ಮೇಲ್‌ ಮಾಡಿದ ಪ್ರಕರಣದಲ್ಲಿ ಆಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಆರಂಭವಾಗಿದ್ದು, ಕೈದಿ ಸಂಖ್ಯೆ 15528 ನೀಡಲಾಗಿದೆ.

ಕಳೆದ 14 ತಿಂಗಳಿನಿಂದ ಜೈಲಿನಲ್ಲಿದ್ದರೂ ಪ್ರಜ್ವಲ್‌ ರೇವಣ್ಣ ಅವರ ಶಿಕ್ಷೆ ಅಧಿಕೃತವಾಗಿ ತೀರ್ಪು ಪ್ರಕಟವಾದ ಆಗಸ್ಟ್‌ ೨ರಿಂದ ಆರಂಭವಾಗಿದೆ. ಶಿಕ್ಷೆ ಕಾಯಂ ಆಗುತ್ತಿದ್ದಂತೆ ಜೈಲಿನಲ್ಲಿ ಬಿಳಿ ಸಮವಸ್ತ್ರ ನೀಡಲಾಗಿದೆ.
ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ್ದರಿಂದ ವಿಚಲಿತರಾಗಿದ್ದ ಪ್ರಜ್ವಲ್‌ ರಾತ್ರಿಯೀಡಿ ನಿದ್ದೆ ಮಾಡದೇ ಒದ್ದಾಡಿದ್ದಾರೆ. ಮುಂಜಾನೆ 6.30ಕ್ಕೆ ನಿದ್ದೆಗೆ ಜಾರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ ಅವಲಕ್ಕಿ ಉಪ್ಪಿಟ್ಟು ನೀಡಲಾಗಿದೆ.

ಜೈಲು ನಿಯಮಾವಳಿ ಅನುಸಾರ ಜೈಲು ಆಧೀಕ್ಷಕರು ನೀಡುವ ಕೆಲಸ ಮಾಡಿಕೊಂಡಿರಬೇಕು. ಕಡ್ಡಾಯ ಜೈಲಿನೊಳಗೆ 8 ಗಂಟೆ ಕೆಲಸ ಮಾಡಬೇಕು. ಜೊತೆಗೆ ಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿ ಖೈದಿಗಳ ನಿಯಮಗಳನ್ನ ಚಾಚು ತಪ್ಪದೆ ಪಾಲಿಸಬೇಕು. ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು, ಕರಕುಶಲ ವಸ್ತು, ಮರಗೆಲಸ ಸೇರಿ ಯಾವುದರೂ ಒಂದು ಕೆಲಸ ಆಯ್ಕೆ ಮಾಡಿಕೊಳ್ಳಬೇಕು. ವಿಶೇಷ ಅಂದರೆ ಜೈಲಿನಲ್ಲಿ ನೀಡಲಾಗುವ ಕೆಲಸದಲ್ಲೂ ಬಡ್ತಿ ದೊರೆಯಲಿದೆ.

ಪ್ರಜ್ವಲ್ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ಪಾವತಿ ಮಾಡಲಾಗುತ್ತೆ. ಮೊದಲ ಒಂದು ವರ್ಷ ಕೌಶಲ್ಯ ರಹಿತ ಎಂದು ಪರಿಗಣಿಸಿ 524 ರೂಪಾಯಿ ಸಂಬಳ ನೀಡಲಾಗುತ್ತೆ. ಆಮೇಲೆ ಅರೆ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತೆ. ಬಡ್ತಿ ಜೊತೆಗೆ ಸಂಬಳ ಕೂಡ ಹೆಚ್ಚು ಸಿಗಲಿದೆ ಎಂದು ಜೈಲು ಸಿಬ್ಬಂದಿ ತಿಳಿಸಿದೆ.

ಆಜೀವ ಶಿಕ್ಷೆ ಅಂದರೇನು?

ರಾಜಕಾರಣಿ ಅದರಲ್ಲೂ ಸಂಸದ ಆಗಿರುವ ವ್ಯಕ್ತಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ನೀಡಿದ್ದು ಅತೀ ದೊಡ್ಡ ಶಿಕ್ಷೆಯಾಗಿದೆ. ಕೇಂದ್ರ ಸರ್ಕಾರ ನೂತನವಾಗಿ ರಚಿಸಿರುವ ನ್ಯಾಯ ಸಂಹಿತ್‌ ಪ್ರಕಾರ ಆಜೀವ ಜೈಲು ಶಿಕ್ಷೆ ಅಂದರೆ ಸಹಜ ಸಾವಿಗೆ ಗುರಿಯಾಗುವವರೆಗೂ ಜೈಲಿನಲ್ಲಿಯೇ ಇರಬೇಕು. ಜೀವಾವಧಿ ಶಿಕ್ಷೆ ಅಂದರೆ ಗರಿಷ್ಠ 14 ವರ್ಷ ಜೈಲು ಶಿಕ್ಷೆ ನೀಡಲಾಗುತ್ತಿದೆ. ಅಲ್ಲದೇ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಆಗುವ ಅವಕಾಶವೂ ಇರುತ್ತದೆ. ಆದರೆ ಆಜೀವ ನಿಷೇಧ ಅಂದರೆ ಜೀವನ ಪರ್ಯಾಂತ ಜೈಲು ಶಿಕ್ಷೆ ಅಂದರೆ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೂ ಆವಕಾಶ ಇರುವುದಿಲ್ಲ.

ಪ್ರಜ್ವಲ್ ರೇವಣ್ಣ ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ಅನುಭವಿಸಬೇಕಾಗಿದೆ. ಜೀವಾವಧಿಗಿಂತ ಜೀವನಪರ್ಯಂತ ಶಿಕ್ಷೆ ದೊಡ್ಡದು. ಐಪಿಸಿ ಸೆಕ್ಷನ್‌ 376(2) (n)ರಡಿ, ಓರ್ವ ಮಹಿಳೆ ಮೇಲಿನ ಪದೇ ಪದೇ ಅತ್ಯಾಚಾರ ಗಂಭೀರ ಅಪರಾಧವೆಂದು ಪರಿಗಣಿಸಲಾಗಿದ್ದು, ಕೋರ್ಟ್ ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆ ಅಂದ್ರೆ, 14 ವರ್ಷದ ಬಳಿಕ ಕ್ಷಮಾದಾನ ಕೊಡಬಹುದು.

ಕ್ಷಮಾದಾನ ಕೊಡುವಂತಹ ಅಧಿಕಾರ ಸರ್ಕಾರ ಮತ್ತು ರಾಜ್ಯಪಾಲರಿಗಿದೆ. ಆದ್ರೆ, ಕೋರ್ಟ್ ಜೀವನಪರ್ಯಂತವೆಂದು ಆದೇಶದಲ್ಲಿ ಉಲ್ಲೇಖವಿರೋದ್ರಿಂದ ಪ್ರಜ್ವಲ್ ಜೀವನಪೂರ್ತಿ ಸೆರೆವಾಸದಲ್ಲೇ ಇರಬೇಕು. ಅಪರಾಧಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ಇಂದಿನಿಂದ ಆರಂಭವಾಗಲಿದೆ. ಇಲ್ಲಿವರೆಗೆ ಅನುಭವಿಸಿದ 14 ತಿಂಗಳ ಜೈಲುವಾಸ ಅನ್ವಯಿಸಲ್ಲ.

ಪ್ರಜ್ವಲ್ ರೇವಣ್ಣಗೆ 11ಲಕ್ಷದ 60ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡದಲ್ಲಿ 11 ಲಕ್ಷದ 25 ಸಾವಿರ ರೂಪಾಯಿಯನ್ನ ಸಂತ್ರಸ್ತೆಗೆ ನೀಡುವಂತೆ ಆದೇಶ ಹೊರಡಿಸಿದೆ. ಐಪಿಸಿ ಸೆಕ್ಷನ್ 376(2)(K) ಅಡಿಯಲ್ಲಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ 5ಲಕ್ಷ ದಂಡ ವಿಧಿಸಲಾಗಿದೆ.

ಮತ್ತೊಂದು ಐಪಿಸಿ ಸೆಕ್ಷನ್ 376(2)(N)ರ ಅಡಿಯಲ್ಲಿ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದಡಿ ಜೀವನಪರ್ಯಂತ ಜೈಲು ವಾಸ ಶಿಕ್ಷೆ ವಿಧಿಸಿ, 5ಲಕ್ಷ ದಂಡ ಹಾಕಲಾಗಿದೆ. ಅಲ್ಲದೇ, ಐಪಿಸಿ ಸೆಕ್ಷನ್ 354(B)ಅಡಿಯಲ್ಲಿ 7ವರ್ಷ ಸೆರೆವಾಸ ಮತ್ತು 50 ಸಾವಿರ ದಂಡ ಹಾಕಿದೆ. ಇನ್ನೂ IPC 354(A), IPC 354(c), IPC 201, ಐಟಿ ಕಾಯ್ದೆ ಸೆ.66(E) ರ ಅಡಿ 3ವರ್ಷ ಸೆರೆವಾಸ ಮತ್ತು 25 ಸಾವಿರ ದಂಡ ಹಾಕಲಾಗಿದೆ. IPC 506ರಡಿ 2 ವರ್ಷ ಸೆರೆವಾಸ ಮತ್ತು 10 ಸಾವಿರ ದಂಡ ವಿಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments