Wednesday, December 24, 2025
Google search engine
Homeರಾಜ್ಯದಟ್ಟ ಮಂಜಿನಿಂದ ಹಾರದ ವಿಮಾನ: ಕರ್ನಾಟಕದ 21 ಸಚಿವರು, ಶಾಸಕರ ಪರದಾಟ!

ದಟ್ಟ ಮಂಜಿನಿಂದ ಹಾರದ ವಿಮಾನ: ಕರ್ನಾಟಕದ 21 ಸಚಿವರು, ಶಾಸಕರ ಪರದಾಟ!

ದಟ್ಟವಾದ ಮಂಜಿನಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಬೆಳಗಾವಿಗೆ ಮರಳಬೇಕಿದ್ದ ಕರ್ನಾಟಕದ (Karnataka mla) 21 ಶಾಸಕರು  ಇಂಡಿಗೋ (IndiGo) ವಿಮಾನದಲ್ಲೆ ಸಿಲುಕಿಕೊಂಡಿದ್ದಾರೆ.

ಭಾನುವಾರ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ವೋಟ್ ಚೋರಿ ವಿರುದ್ಧದ ಬೃಹತ್ ರ್ಯಾಲಿಯಲ್ಲಿ ಕರ್ನಾಟಕದ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ದೆಹಲಿಯ ವಿಮಾನದಲ್ಲಿ ಹಲವು ಗಂಟೆಗಳ ಕಾಲ ಕಾಯಬೇಕಾಯಿತು.

ದಾವಣಗೆರೆಯಲ್ಲಿ ಭಾನುವಾರ ನಿಧನರಾದ ಮಾಜಿ ಕೇಂದ್ರ ಸಚಿವ ಶಾಮನೂರು ಶಿವಶಂಕರಪ್ಪ(Shamanuru Shivashankarappa) ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೆಹಲಿಯಿಂದ (Delhi) ಬೆಳಗಾವಿಗೆ ಹೋಗುವ ವಿಮಾನ ಏರಿದ್ದರು.

ಶಾಸಕರ ವಿಮಾನ ಸೋಮವಾರ ಬೆಳಗ್ಗೆ 5:30ಕ್ಕೆ ದೆಹಲಿಯಿಂದ ಹೊರಡಬೇಕಿತ್ತು. ವಿಮಾನದ ಒಳಗಡೆ ಕುಳಿತುಕೊಂಡ ಬಳಿಕ ದಟ್ಟವಾದ ಹೊಗೆಯಿಂದಾಗಿ ವಿಮಾನ ಟೇಕಾಫ್‌ ಆಗದ ಕಾರಣ ಸುಮಾರು 4 ಗಂಟೆ ವಿಮಾನದಲ್ಲೇ ಕಾಲಕಳೆಯಬೇಕಾಯಿತು.

ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕಾಫ್‌ ಅಗದ ಕಾರಣ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಿದ್ದ ಸಚಿವರು ಹಾಗೂ ಶಾಸಕರು ವಿಮಾನ ಎಷ್ಟು ಗಂಟೆಗೆ ಟೇಕಾಫ್‌ ಆಗಲಿದೆ ಎಂಬ ಮಾಹಿತಿಯೂ ಸಿಗದೇ ಪರದಾಡುವಂತಾಯಿತು.

ದೆಹಲಿಯಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನಗಳ ಟೇಕಾಫ್‌ ಮತ್ತು ಲ್ಯಾಂಡಿಂಗ್‌ಗೆ ಸಮಸ್ಯೆಯಾಗಿದೆ. ಕೊನೆಯ ಮಧ್ಯಾಹ್ನ 11 ಗಂಟೆ ನಂತರ ಮಂಜಿನ ವಾತಾವರಣ ಸ್ವಲ್ಪ ಕಡಿಮೆ ಆದ ನಂತರ ವಿಮಾನ ಬೆಳಗಾವಿ ಕಡೆ ಪ್ರಯಾಣಿಸಿತು ಎಂದು ತಿಳಿದು ಬಂದಿದೆ.

ವಿಮಾನದಲ್ಲಿ ಯಾರಿದ್ದಾರೆ?

ಹೆಚ್‌ಕೆ ಪಾಟೀಲ್, ಲಕ್ಷ್ಮೀ ಹೆಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ರಾಜು ಗೌಡ, ಸಲೀಂ ಅಹಮದ್, ತನ್ವೀರ್ ಸೇಠ್, ಸತೀಶ್ ಜಾರಕಿಹೊಳಿ, ಜಿ ಎಸ್ ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಈಶ್ವರ್ ಖಂಡ್ರೆ, ನಾಗೇಂದ್ರ, ಎಂ ಬಿ ಪಾಟೀಲ್, ಅಲ್ಲಮಪ್ರಭು, ರೆಹಮಾನ್ ಖಾನ್, ಕೆಜೆ ಜಾರ್ಜ್, ಕೋನರೆಡ್ಡಿ, ಬಸನಗೌಡ ಬಾದರ್ಲಿ, ಆನಂದ್ ಗಡದೇವರಮಠ, ಜೆ ಟಿ ಪಾಟೀಲ್, ತಿಪ್ಪಣ್ಣ ಕಾಮಕನೂರ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments