Home ರಾಜ್ಯ ರಾಜ್ಯದಲ್ಲಿ ಹೆಚ್ಚುತ್ತಿರುವ ಗೋ ಹಿಂಸೆ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ಹೆಚ್ಚುತ್ತಿರುವ ಗೋ ಹಿಂಸೆ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಗೋಹಿಂಸೆ ಹಾಗೂ ಗೋಹತ್ಯೆ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

by Editor
0 comments
cow

ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಗೋಹಿಂಸೆ ಹಾಗೂ ಗೋಹತ್ಯೆ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಚಾಮರಾಜಪೇಟೆ ಹಸು ಕೆಚ್ಚಲು ಕೊಯ್ದ ಘಟನೆ ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ರಾಜ್ಯದ ಹಲವು ಕಡೆ ಗೋವು ಹಿಂಸೆ ಹಾಗೂ ಹತ್ಯೆ ಮಾಡಿ ಭೋಜನ ಮಾಡಿದ ಪ್ರಕರಣಗಳು ವರದಿಯಾಗುತ್ತಿವೆ.

ರಾಜ್ಯದಲ್ಲಿ ದಿಢೀರನೆ ಹೆಚ್ಚಾಗುತ್ತಿರುವ ಗೋ ಹಿಂಸೆ ಹಾಗೂ ಗೋ ಹತ್ಯೆ ಪ್ರಕರಣಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಆದೇಶಿಸಿದೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಕೃತ್ಯಗಳ ಹಿಂದಿನ ಮನಸ್ಥಿತಿ ಗುರುತಿಸಬೇಕಾಗಿದೆ. ಕೃತ್ಯದ ಹಿಂದೆ ಬೇರೆ ಯಾರಾದ್ದಾದರೂ ಪ್ರಚೋದನೆ ಇದೆಯೇ? ಅಥವಾ ವೈಯಕ್ತಿಕವಾಗಿ ಕೃತ್ಯ ಎಸಗುತ್ತಿದ್ದಾರೆಯೇ ಅಥವಾ ಸಂಘಟನೆಗಳ ಕೈವಾಡ ಇದೆಯಾ ಎಂಬ ಆಯಾಮಗಳಲ್ಲಿ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

banner

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ವಿಭಾಗಿಸುವ ಯಾವುದೇ ಪ್ರಸ್ತಾವನೆಗಳು ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಆದರೆ, ರಾಜ್ಯದ ಎಲ್ಲಾ ಜೈಲುಗಳಲ್ಲಿ ನಡೆಯುತ್ತಿರುವ ನಿಯಮ ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಜರುಗಿಸಲಾಗುವುದು. ಬಹಳ ವರ್ಷಗಳಿಂದಲೂ ಬಂಧೀಖಾನೆ ಇಲಾಖೆಗೆ ನೇಮಕಾತಿಗಳು ನಡೆದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ನೇಮಕಾತಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ನೇಮಕಾತಿ ಬಳಿಕ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದರೋಡೆಕೋರರ ಶೀಘ್ರ ಬಂಧನ

ಬೀದರ್ನಲ್ಲಿ ಎಟಿಎಂ ವಾಹನದ ದರೋಡೆ ಪ್ರಕರಣದ ಮಾಹಿತಿಗಳನ್ನು ಕಲೆಹಾಕಲಾಗಿದೆ. ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲಾಗುವುದು. ಮಂಗಳೂರಿನ ಬ್ಯಾಂಕ್ದರೋಡೆಯಲ್ಲಿ 2 ಕಾರುಗಳನ್ನು ಬಳಸಿರುವುದು ಸೇರಿದಂತೆ ಇತರ ಮಾಹಿತಿಗಳು ದೊರೆತಿವೆ. ಎರಡೂ ಘಟನೆಗಳಿಗೆ ತಂಡವನ್ನು ರಚನೆ ಮಾಡಿ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ಜಿ.ಪರಮೇಶ್ವರ್ ವಿವರಿಸಿದರು.

ಆರೋಪಿಗಳ ಬಗ್ಗೆ ಹಲವಾರು ಮಾಹಿತಿಗಳು ಲಭ್ಯವಾಗಿವೆ. ಆದರೆ, ಸದ್ಯಕ್ಕೆ ಯಾವುದನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಬೀದರ್ ಘಟನೆಯಲ್ಲಿ ಶಸ್ತ್ರ ಸಜ್ಜಿತ ಸಿಬ್ಬಂದಿ ಇಲ್ಲದೇ ಇರುವುದನ್ನು ನೋಡಿಕೊಂಡು ಕೃತ್ಯ ಎಸಗಲಾಗಿದೆ. ಮಂಗಳೂರಿನಲ್ಲೂ ಸೆಕ್ಯೂರೆಟಿ ಗಾರ್ಡ್ ಇಲ್ಲದಾಗ ದರೋಡೆ ಆಗಿದೆ ಎಂದು ಅವರು ಹೇಳಿದರು.

ಸರ್ಕಾರ ಈಗಾಗಲೇ ಬ್ಯಾಂಕ್ಗಳಿಗೆ ಭದ್ರತೆಗೆ ಸಂಬಂಧಪಟ್ಟಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ. ಬ್ಯಾಂಕ್ನವರು ಇದನ್ನು ಗಂಭೀರವಾಗಿ ತೆಗೆದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಯಲ್ಲಾಪುರದಲ್ಲಿ ಭೀಕರ ಅಪಘಾತ: ಲಾರಿ ಪಲ್ಟಿಯಾಗಿ ಸಂತೆಗೆ ಹೋಗುತ್ತಿದ್ದ 10 ಮಂದಿ ದುರ್ಮರಣ ಇಂಗ್ಲೆಂಡ್- ಭಾರತ ಮೊದಲ ಟಿ-20 ಇಂದು: `ಸೂರ್ಯ’ನ ಮೆರಗು ಸಿಗುವುದೇ? ಕಾರ್ಲೊಸ್ 50ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ ನೊವಾಕ್ ಜೊಕೊವಿಕ್! ಬಾಲ್ಕನಿಯಿಂದ 2 ಮಕ್ಕಳನ್ನು ಎಸೆದು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ! ವಿಷ ಹಾಕಿ ಮಂಗಗಳ ಹತ್ಯೆಗೈದ ಕಿರಾತಕರು: ಶಾಸ್ತ್ರೋಕ್ತ ಅಂತ್ಯಕ್ರಿಯೆ ನೆರವೇರಿಸಿದ ಗ್ರಾಮಸ್ಥರು! ನಗದು ಪುರಸ್ಕಾರ ನೀಡದೇ ವಿಶ್ವಕಪ್ ಗೆದ್ದ ಖೋಖೋ ಆಟಗಾರರಿಗೆ ಅಪಮಾನ? ಗೇಮ್ ಚೇಂಜರ್, ಪುಷ್ಪಾ ನಿರ್ಮಾಪಕರಿಗೆ ಐಟಿ ಶಾಕ್ UGC ರಾಜ್ಯಗಳ ಹಕ್ಕುಗಳಿಗೆ ಕತ್ತರಿ; ಭುಗಿಲೆದ್ದ ಯುಜಿಸಿ ಕರಡು ನಿಯಮ ವಿವಾದ World News ಟರ್ಕಿ ರೆಸಾರ್ಟ್ ನಲ್ಲಿ ಭೀಕರ ಅಗ್ನಿ ದುರಂತ: 66 ಮಂದಿ ದುರ್ಮರಣ ಮಂಗಳೂರು ಬ್ಯಾಂಕ್​​ ದರೋಡೆ ಕಿಂಗ್ ಪಿನ್ ಕಣ್ಣನ್​ಮಣಿಗೆ ಗುಂಡೇಟು