Thursday, September 19, 2024
Google search engine
Homeಕ್ರೀಡೆಕೆಕೆಆರ್ ಗೆ 1 ರನ್ ರೋಚಕ ಜಯ, ಆರ್ ಸಿಬಿಗೆ ಸತತ 6ನೇ ಸೋಲು

ಕೆಕೆಆರ್ ಗೆ 1 ರನ್ ರೋಚಕ ಜಯ, ಆರ್ ಸಿಬಿಗೆ ಸತತ 6ನೇ ಸೋಲು

ಜಿದ್ದಾಜಿದ್ದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ರನ್ ನಿಂದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ವೀರೋಚಿತ ಸೋಲುಂಡಿದೆ. ಈ ಮೂಲಕ ಐಪಿಎಲ್ ಟಿ-20 ಟೂರ್ನಿಯಲ್ಲಿ ಸತತ 6ನೇ ಸೋಲುಂಡಿದೆ.

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್ ಸಂಪಾದಿಸಿತು. ಬೃಹತ್ ಮೊತ್ತ ಬೆಂಬತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 221 ರನ್ ಗೆ ಆಲೌಟಾಯಿತು.

ಪಂದ್ಯದ ಕೊನೆಯ ಓವರ್ ನಲ್ಲಿ 15 ರನ್ ಗಳಿಸಬೇಕಾದ ಒತ್ತಡವಿತ್ತು. ಈ ಹಂತದಲ್ಲಿ 8 ವಿಕೆಟ್ ಕಳೆದುಕೊಂಡಿದ್ದ ಆರ್ ಸಿಬಿ ಪರ ಕರ್ಣ್ ಶರ್ಮ, ಮಿಚೆಲ್ ಸ್ಟಾರ್ಕ್ ಓವರ್ ನಲ್ಲಿ 3 ಸಿಕ್ಸರ್ ಸಿಡಿಸಿ ಗೆಲುವಿನ ಭರವಸೆ ಮೂಡಿಸಿದ್ದರು.

ಕೊನೆಯ 2 ಎಸೆತದಲ್ಲಿ 3 ರನ್ ಗಳಿಸಬೇಕಿತ್ತು.  ಆದರೆ 4ನೇ ಎಸೆತದಲ್ಲಿ ಕರ್ಣ್ ಶರ್ಮ ಔಟಾಗಿದ್ದರಿಂದ ತಂಡ ಒತ್ತಡಕ್ಕೆ ಸಿಲುಕಿತ್ತು. ಕೊನೆಯ ಎರಡು ಎಸೆತಗಳಲ್ಲಿ ಸತತ 2 ವಿಕೆಟ್ ಕಳೆದುಕೊಂಡ ಆರ್ ಸಿಬಿ 1 ರನ್ ನಿಂದ ಸೋಲುಂಡಿತು.

ಆರ್ ಸಿಬಿ ಪರ ವಿಲ್ ಜ್ಯಾಕ್ 32 ಎಸೆತದಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಸೇರಿದ 55 ರನ್ ಮತ್ತು ರಜತ್ ಪಟಿದರ್ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 102 ರನ್ ಜೊತೆಯಾಟ ನಿಭಾಯಿಸಿ ಗೆಲುವಿನ ಭರವಸೆ ಮೂಡಿಸಿದರು.

ನಂತರ ಸುಯೆಶ್ ಪ್ರಭುದೇಸಾಯಿ (24), ದಿನೇಶ್ ಕಾರ್ತಿಕ್ (25), ಕರ್ಣ್ ಶರ್ಮ (20 ರನ್ , 7 ಎಸೆತ, 3 ಸಿಕ್ಸರ್) , ವಿರಾಟ್ ಕೊಹ್ಲಿ (18 ರನ್, 1 ಬೌಂಡರಿ, 2 ಸಿಕ್ಸರ್) ತಕ್ಕಮಟ್ಟಿಗೆ ಹೋರಾಟ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments