ಆಹಾರ ಪ್ಯಾಕಿಂಗ್ ನಲ್ಲಿರುವ ಸುಮಾರು 3600 ಕೆಮಿಕಲ್ ಗಳು ಮಾನವರ ದೇಹ ಸೇರುತ್ತಿದ್ದು, ಇದರಲ್ಲಿ 100 ರಾಸಯನಿಕಗಳು ಅಪಾಯಕಾರಿ ಎಂದು ಅಧ್ಯಯನ ವರದಿ ಅಘಾತಕಾರಿ ವಿಷಯವನ್ನು ಹೇಳಿದೆ.
ಜ್ಯೂರಿಚ್ ಮೂಲದ ಬಿರ್ಗಿಟ್ ಗ್ಯುಯೆಕಾದಲ್ಲಿನ ಫುಡ್ ಪ್ಯಾಕೇಜಿಂಗ್ ಫಾರ್ಮ್ ಫೌಂಡೇಷನ್ ನಡೆಸಿದ ಸಮೀಕ್ಷೆಯಲ್ಲಿ ಆಹಾರ ಪ್ಯಾಕೇಜಿಂಗ್ ಅಥವಾ ತಯಾರಿಕೆಯಲ್ಲಿ ಬಳಸಲಾಗುವ 3600ಕ್ಕೂ ಹೆಚ್ಚು ರಾಸಾಯನಿಕಗಳು ಮಾನವ ದೇಹದಲ್ಲಿ ಪತ್ತೆಯಾಗಿವೆ ಎಂದು ಹೇಳಿದೆ.
ಪ್ಯಾಕೇಜಿಂಗ್ ನಲ್ಲಿ ಬಳಸುವ ಕೆಮಿಕಲ್ ಗಳ ಪೈಕಿ ಕನಿಷ್ಠ 100 ಕೆಮಿಕಲ್ ಗಳು ಅಪಾಯಕಾರಿ ಆಗಿದ್ದು, ಇವುಗಳ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆಯೇ ಇಲ್ಲ ಎಂದು ವರದಿ ಹೇಳಿದೆ.
ಕೆಲವು ಆಹಾರ ಪದಾರ್ಥಗಳ ಪ್ಯಾಕೇಜಿಂಗ್ ನಲ್ಲಿ ಬಳಸುವ ರಾಸಯನಿಕಗಳು ಉತ್ತಮ ಗುಣಮಟ್ಟದ್ದಾಗಿವೆ. ಆದರೆ ನಿಷೇಧಿಸಲಾದ PFAS ಮತ್ತು ಬಿಸ್ಫೆನಾಲ್ A ನಂತಹ ರಾಸಯನಿಕಗಳು ಮಾನವರ ದೇಹದಲ್ಲಿ ಪತ್ತೆಯಾಗುತ್ತಿವೆ ಎಂದು ವರದಿ ಹೇಳಿದೆ.
ಈ ಹಿಂದಿನ ಸಂಶೋಧನೆಯಲ್ಲಿ ಆಹಾರ ಪ್ಯಾಕೇಜಿಂಗ್ ನಲ್ಲ 14,000 ರಾಸಾಯನಿಕಗಳನ್ನು ಪಟ್ಟಿ ಮಾಡಲಾಗಿತ್ತು. ಆಹಾರ ಪ್ಯಾಕೇಜಿಂಗ್ ಗೆ ಬಳಸುವ ಪ್ಲಾಸ್ಟಿಕ್, ಕಾಗದ, ಗಾಜು, ಲೋಹ ಅಥವಾ ಇತರ ವಸ್ತುಗಳ ರಾಸಯನಿಕಗಳು ದೇಹವನ್ನು ಸೇರುತ್ತಿವೆ. ಅಲ್ಲದೇ ಕನ್ವೇಯರ್ ಬೆಲ್ಟ್ ಗಳು ಅಥವಾ ಅಡುಗೆ ಪಾತ್ರೆಗಳ ಅಶುದ್ಧತೆಯಿಂದಲೂ ಆಗಬಹುದು ಎಂದು ವರದಿ ವಿವರಿಸಿದೆ.
ಮಕ್ಕಳಿಗೆ ಹಾಲುಣಿಸುವ ಬಾಟಲಿಗಳಲ್ಲೂ ರಾಸಯನಿಕಗಳು ಪತ್ತೆಯಾಗಿವೆ. ಆಹಾರ ಪ್ಯಾಕೇಜಿಂಗ್ ನಲ್ಲಿ ಬಿಸ್ಫೆನಾಲ್ ಎ, ಥಾಲೇಟ್ಸ್ ಮುಂತಾದ ಈ ಅಪಾಯಕಾರಿ ರಾಸಾಯನಿಕಗಳು ಕಂಡು ಬಂದಿದೆ. ಈ ರಾಸಯನಿಕ ದೇಹವನ್ನು ಬಂಜೆತನ, ಅಂಗಾಂಗ ವೈಫಲ್ಯ ಮುಂತಾದ ಸಮಸ್ಯೆಗಳು ಕಂಡು ಬಂದಿವೆ.