Thursday, September 19, 2024
Google search engine
Homeತಾಜಾ ಸುದ್ದಿನೇಪಾಳದಲ್ಲಿ ನದಿಗೆ ಬಿದ್ದ ಬಸ್: 14 ಭಾರತೀಯರು ಸಾವು

ನೇಪಾಳದಲ್ಲಿ ನದಿಗೆ ಬಿದ್ದ ಬಸ್: 14 ಭಾರತೀಯರು ಸಾವು

ಬಸ್ ನದಿಗೆ ಬಿದ್ದ ಪರಿಣಾಮ 14 ಮಂದಿ ಭಾರತೀಯರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿರುವ ಭೀಕರ ಘಟನೆ ನೇಪಾಳದಲ್ಲಿ ಸಂಭವಿಸಿದೆ.

ಭಾರತದ ಉತ್ತರ ಪ್ರದೇಶದಲ್ಲಿ ನೋಂದಣಿ ಹೊಂದಿರುವ ಬಸ್ 40 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಮರ್ಸಗಂಡಿ ನದಿಗೆ ಬಿದ್ದಿದೆ.

ರಾಜಧಾನಿ ಕಠ್ಮಂಡುವಿನಿಂದ ಪೊಖಾರಾಗೆ ಪ್ರಯಾಣಿಸುತ್ತಿದ್ದ ಬಸ್ ಕಠ್ಮಂಡುವಿನಿಂದ 100 ಕಿ.ಮೀ. ದೂರದ ತಹಹುನ್ ಜಿಲ್ಲೆಯಲ್ಲಿ ನದಿಗೆ ಉರುಳಿಬಿದಿದ್ದೆ ಎಂದು ಹೇಳಲಾಗಿದೆ.

ಕಳೆದ ತಿಂಗಳಷ್ಟೇ ಭೂಕುಸಿತದಿಂದ ಎರಡು ಬಸ್ ಗಳು ನದಿಗೆ ಉರುಳಿ ಬಿದ್ದಿದ್ದರಿಂದ 7 ಭಾರತೀಯರು ಕೊಚ್ಚಿ ಹೋಗಿದ್ದರು. ಈ ಘಟನೆ ಬೆನ್ನಲ್ಲೇ ಮತ್ತೊಂದು ದುರ್ಘಟನೆ ವರದಿಯಾಗಿದ್ದು, ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments