Saturday, September 28, 2024
Google search engine
Homeತಾಜಾ ಸುದ್ದಿಮೊದಲ ದಿನವೇ 145 ಕೋಟಿ ಬಾಚಿ ದಾಖಲೆ ಬರೆದ `ದೇವರ'!

ಮೊದಲ ದಿನವೇ 145 ಕೋಟಿ ಬಾಚಿ ದಾಖಲೆ ಬರೆದ `ದೇವರ’!

ಜೂನಿಯರ್ ಎನ್ ಟಿಆರ್ ನಟಿಸಿರುವ ದೇವರ-1 ಚಿತ್ರ ಮೊದಲ ದಿನವೇ ಜಾಗತಿಕ ಮಟ್ಟದಲ್ಲಿ 145 ಕೋಟಿ ರೂ. ಗಳಿಸುವ ಮೂಲಕ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಬರೆದಿದೆ.

ದೇವರ-1 ಚಿತ್ರ ಹಲವು ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲದಲ್ಲಿ ಶುಕ್ರವಾರ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ನಡುವೆಯೂ ಮೊದಲ ದಿನವೇ 145 ಕೋಟಿ ರೂ. ಗಳಿಸಿದೆ.

ಕೋರೆಟೆಲಾ ಶಿವ ನಿರ್ದೇಶಿಸಿ, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ನಟಿಸಿರುವ ಚಿತ್ರ ಭಾರತದಲ್ಲಿಯೇ 98.7 ಕೋಟಿ ರೂ. ಸಂಪಾದಿಸಿ ಮೊದಲ ದಿನವೇ ಭರ್ಜರಿ ಆರಂಭ ಪಡೆದಿದೆ.

ಸಕ್ನಿಕ್ ವೆಬ್ ಸೈಟ್ ಈ ಸುದ್ದಿಯನ್ನು ಪ್ರಕಟಿಸಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್ ಮತ್ತು ಟಿಕೆಟ್ ಮಾರಾಟ ಸೇರಿದಂತೆ ಒಟ್ಟಾರೆ ಲೆಕ್ಕಾಚಾರದಲ್ಲಿ 145 ಕೋಟಿ ರೂ. ಗಳಿಸಿದೆ ಎಂದು ಹೇಳಿದೆ.

ಪ್ರಭಾಸ್ ನಟಿಸಿದ್ದ ಕಲ್ಕಿ 2898 ಎಡಿ ಚಿತ್ರ ಮೊದಲ ದಿನವೇ 177 ಕೋಟಿ ರೂ. ಗಳಿಸಿದ್ದು, ನಂತರದ ಸ್ಥಾನವನ್ನು ದೇವರ ಪಡೆದಿದೆ. ಹಿಂದಿಯಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಸ್ತ್ರೀ-2 ಚಿತ್ರದ ದಾಖಲೆಯನ್ನು ದೇವರ ಮುರಿದು ಮುನ್ನುಗ್ಗಿದ್ದು, ವೀಕೆಂಡ್ ನಲ್ಲಿ ಈ ಅಬ್ಬರ ಎಷ್ಟು ದಿನ ಮುಂದುವರಿಯುತ್ತದೆ ಎಂದು ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments