ಟೋಕನ್ ವಿತರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 6 ಭಕ್ತರು ಮೃತಪಟ್ಟ ದಾರುಣ ಘಟನೆ ತಿರುಪತಿಯಲ್ಲಿ ಸಂಭವಿಸಿದೆ.
ತಿರುಪತಿಯ ವಿಷ್ಣುನಿವಾಸಂ ದೇವಸ್ಥಾನದಲ್ಲಿ ವೈಕುಂಠದರ್ಶನ ಸರ್ವದರ್ಶನಮ್ ಗಾಗಿ ಭಕ್ತರಿಗೆ ಬುಧವಾರ ಟೋಕನ್ ವಿತರಿಸುವಾಗ ಈ ದುರಂತ ಸಂಭವಿಸಿದೆ.
ಟೋಕನ್ ಪಡೆಯಲು ಜನರು ಏಕಾಏಕಿ ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, ತಮಿಳುನಾಡಿನ ಸೇಲಂ ನಿವಾಸಿ ಸೇರಿದಂತೆ 6 ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಕೂಡಲೇ ಆಂಬುಲೆನ್ಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನಾ ಸ್ಥಳದಲ್ಲಿ ಪೊಲೀಸರು ಇದ್ದು, ಗಾಯಗೊಂಡವರನ್ನು ಆಂಬುಲೆನ್ಸ್ ನಲ್ಲಿ ಸಾಗಿಸಿದರು.