ಕ್ರೀಡಾ ಸಂಕೀರ್ಣದ ವೇಳೆ ನೆರೆದಿದ್ದ ಗುಂಪಿನ ಮೇಲೆ ನಿಯಂತ್ರಣ ತಪ್ಪಿದ ಕಾರು ಹರಿದ ಪರಿಣಾಮ 35 ಮಂದಿ ಮೃತಪಟ್ಟು, 43ಕ್ಕೂ ಹೆಚ್ಚು ಮಂದಿ ಗಾಯಗೊಂಡ ಭೀಕರ ಘಟನೆ ಚೀನಾದಲ್ಲಿ ಸಂಭವಿಸಿದೆ.
ದಕ್ಷಿಣ ಚೀನಾದ ಜುಹಾಯಿಯಲ್ಲಿ ಮಂಗಳವಾರ ಈ ದುರ್ಘಟನೆ ಸಂಭವಿಸಿದ್ದು, ಕಾರು ಚಲಾಯಿಸುತ್ತಿದ್ದ 62 ವರ್ಷದ ವೃದ್ಧನನ್ನು ಬಂಧಿಸಲಾಗಿದೆ.
ಜನರ ಮೇಲೆ ಏಕಾಏಕಿ ಕಾರು ನುಗ್ಗಿದ್ದರಿಂದ ಉಗ್ರರ ದಾಳಿ ಇರಬಹುದು ಎಂದು ಶಂಕಿಸಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಆದರೆ ಕಾರು ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಕ್ರೀಡಾ ಸಂಕೀರ್ಣದ ಬಳಿ ಎಲ್ಲೆಂದರಲ್ಲಿ ಜನರು ಬಿದ್ದು ಒದ್ದಾಡುತ್ತಿರುವ ಭೀಕರ ದೃಶ್ಯ ಕಂಡು ಬಂದಿದ್ದು, ಅಪಘಾತದ ಬೆನ್ನಲ್ಲೇ ವೃದ್ದ ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಕೆಲವೇ ಸಮಯದಲ್ಲಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.