Home ಕ್ರೀಡೆ ಮನು ಭಾಕರ್ ಹಿಂದೆ ಬಿದ್ದ 40 ಜಾಹಿರಾತು ಕಂಪನಿಗಳು: ಕೋಟಿ ಕೋಟಿ ಆಫರ್!

ಮನು ಭಾಕರ್ ಹಿಂದೆ ಬಿದ್ದ 40 ಜಾಹಿರಾತು ಕಂಪನಿಗಳು: ಕೋಟಿ ಕೋಟಿ ಆಫರ್!

by Editor
0 comments
manu bhaker

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಡಬಲ್ ಪದಕ ವಿಜೇತ ಶೂಟರ್ ಮನು ಬಾಕರ್ ಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ.

ಒಂದೇ ಒಲಿಂಪಿಕ್ಸ್ ಆವೃತ್ತಿಯಲ್ಲಿ 2 ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ದಾಖಲೆ ಬರೆದಿರುವ ಮನು ಬಾಕರ್ ಮೂರನೇ ಪದಕದತ್ತ ಕಣ್ಣಿಟ್ಟಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಒಲಿದ ಮೊದಲ ಎರಡೂ ಪದಕಗಳನ್ನು ತಂದುಕೊಟ್ಟಿರುವ ಮನು ಭಾಕರ್ ಹಿಂದೆ ಇದೀಗ ಜಾಹಿರಾತು ಕಂಪನಿಗಳು ಮುಗಿಬಿದ್ದಿವೆ.

ಮನು ಭಾಕರ್ 10 ಮೀ. ಏರ್ ಪಿಸ್ತೂಲು ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ  ಗೆದ್ದರೆ, 10 ಮೀ. ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ ನಲ್ಲಿ ಸರ್ಬಜಿತ್ ಸಿಂಗ್ ಜೊತೆ ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ. ಇದೀಗ 25 ಮೀ. ಏರ್ ಪಿಸ್ತೂಲ್ ವಿಭಾಗದ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಹ್ಯಾಟ್ರಿಕ್ ಪದಕದ ನಿರೀಕ್ಷೆಯಲ್ಲಿದ್ದಾರೆ.

banner

ಸುಮಾರು 40 ಜಾಹಿರಾತು ಕಂಪನಿಗಳು ಮನು ಬಾಕರ್ ಜೊತೆ ಒಪ್ಪಂದ ಮಾಡಿಕೊಳ‍್ಳಲು ಮುಗಿಬಿದ್ದಿದ್ದು, ಆರಂಭದಲ್ಲಿ 20 ಲಕ್ಷ ರೂ. ಪಡೆಯುತ್ತಿದ್ದ ಮನುಗೆ ಈಗ ಕಂಪನಿಗಳು ಕೋಟ್ಯಂತರ ರೂಪಾಯಿ ನೀಡಲು ಮುಂದೆ ಬಂದಿವೆ.

ಮನು ಭಾಕರ್ ಜಾಹಿರಾತಿಗಾಗಿ ಆರಂಭದಲ್ಲಿ 20ರಿಂದ 25 ಲಕ್ಷ ರೂ. ಶುಲ್ಕ ವಿಧಿಸುತ್ತಿದ್ದರು. ಆದರೆ ಭಾರೀ ಬೇಡಿಕೆ ಹಿನ್ನೆಲೆಯಲ್ಲಿ ತಮ್ಮ ಶುಲ್ಕವನ್ನು 6ರಿಂದ 7 ಪಟ್ಟು ಹೆಚ್ಚಿಸಿದ್ದು, 1.5 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ಜಾಹಿರಾತು ಕಂಪನಿಗಳು ಈ ಮೊತ್ತವನ್ನು ಕೊಡಲು ಹಿಂದೆ ಮುಂದೆ ನೋಡುತ್ತಿಲ್ಲ ಎಂಬುದು ವಿಶೇಷ.

ಮನು ಭಾಕರ್ ಒಲಿಂಪಿಕ್ಸ್ ನಲ್ಲಿ ಎರಡನೇ ಪದಕ ಗೆದ್ದ ಕೇವಲ 2ರಿಂದ 3 ದಿನಗಳ ಅಂತರದಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ನಾವು ದೀರ್ಘಕಾಲದ ಒಪ್ಪಂದಗಳನ್ನು ಎದುರು ನೋಡುತ್ತಿದ್ದು ಕೆಲವು ಜಾಹಿರಾತುಗಳಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಐಓಎಸ್ ಸ್ಫೋರ್ಟ್ಸ್ ಅಂಡ್ ಎಂಟರ್ ಟೈನ್ ಮೆಂಟ್ ಸಂಸ್ಥೆ ಸಿಇಒ ನೀರವ್ ಥೋಮರ್ ತಿಳಿಸಿದ್ದಾರೆ.

ಬಹುತೇಕ ಜಾಹಿರಾತುಗಳು ಒಂದು ವರ್ಷದ ಒಪ್ಪಂದದ್ದಾಗಿವೆ. ನಾವು ದೀರ್ಘಕಾಲದ ಒಡಂಬಡಿಕೆಗೆ ಒತ್ತು ನೀಡಿದ್ದೇವೆ. ಕೆಲವು 1 ತಿಂಗಳು, 3 ತಿಂಗಳು ಮತ್ತು 6 ತಿಂಗಳ ಅವಧಿಯ ಸಾಮಾಜಿಕ ಜಾಲತಾಣದ ಜಾಹಿರಾತುಗಳಿಗೂ ಬೇಡಿಕೆ ಬಂದಿವೆ ಎಂದು ಥೋಮರ್ ಹೇಳಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ Muda Scam ಸಿಬಿಐನಿಂದ ಮುಡಾ ಹಗರಣದ ತನಿಖೆ: ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟ UP Accident ನಿದ್ದೆಗೆ ಜಾರಿ ಚಾಲಕ, ಚಿರನಿದ್ರೆಗೆ ಜಾರಿಗೆ 5 ವೈದ್ಯರು! ಐಪಿಎಲ್‌ ಹರಾಜಿನಲ್ಲಿ ಸೇಲಾದ 13 ಕನ್ನಡಿಗರು: ಮಯಾಂಕ್ ಕಡೆಗಣನೆ! Goutam Gambhir ಮೊದಲ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಮರಳಿದ ಗಂಭೀರ್! Pakistan ಇಮ್ರಾನ್ ಖಾನ್ ಬೆಂಬಲಿಗರಿಂದ ಧಂಗೆ: ಕಂಡಲ್ಲಿ ಗುಂಡಿಕ್ಕಲು ಆದೇಶ