ಒಂದೇ ಓವರ್ ನಲ್ಲಿ ಸತತ 5 ಸಿಕ್ಸರ್ ಸೇರಿದಂತೆ 40 ಎಸೆತಗಳಲ್ಲಿ ಶತಕ ಪೂರೈಸಿದ ಸಂಜು ಸ್ಯಾಮ್ಸನ್ ಟಿ-20 ಕ್ರಿಕೆಟ್ ನಲ್ಲಿ 2ನೇ ಅತೀ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.
ಹೈದರಾಬಾದ್ ನಲ್ಲಿ ಶನಿವಾರ ನಡೆದ ಮೂರನೇ ಹಾಗೂ ಸರಣಿಯ ಅಂತಿಮ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಸಂಜು ಸ್ಯಾಮ್ಸನ್ ಸಿಡಿಸಿದ ಶತಕದ ನೆರವಿನಿಂದ ಅತೀ ದೊಡ್ಡ ಮೊತ್ತ ದಾಖಲಿಸಿದ ಗೌರವಕ್ಕೆ ಪಾತ್ರವಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ರನ್ ಗಳಿಸಲು ಪರದಾಡಿದ್ದ ಸಂಜು ಸ್ಯಾಮ್ಸನ್ ಚೊಚ್ಚಲ ಶತಕ ಬಾರಿಸಿ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡರು.
ಸಂಜು ಸ್ಯಾಮ್ಸನ್ 40 ಎಸೆತಗಳಲ್ಲಿ ಶತಕ ಪೂರೈಸಿದರು. ಅಂತಿಮವಾಗಿ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ 111 ರನ್ ಬಾರಿಸಿ ಔಟಾದರು. ಈ ಮೂಲಕ ಟಿ-20 ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ ಶತಕ ಗಳಿಸಿದ 2ನೇ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಅಲ್ಲದೇ ಬಾಂಗ್ಲಾದೇಶ ವಿರುದ್ಧ ಶತಕ ಗಳಿಸಿದ ಮೊದಲ ಆಟಗಾರ ಎಂಬ ಮತ್ತೊಂದು ದಾಖಲೆ ನಿರ್ಮಿಸಿದರು.
ಇದಕ್ಕೂ ಮುನ್ನ ಮಾಜಿ ನಾಯಕ ರೋಹಿತ್ ಶರ್ಮ 2017ರಲ್ಲಿ ಇಂದೋರ್ ನಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿದೆ. ಬಾಂಗ್ಲಾದೇಶ ವಿರುದ್ಧ ರೋಹಿತ್ ಶರ್ಮ 87 ರನ್ ಗಳಿಸಿ ವೈಯಕ್ತಿಕ ಗರಿಷ್ಠ ರನ್ ದಾಖಲೆಯನ್ನು ಸ್ಯಾಮ್ಸನ್ ಮುರಿದರು.
ಪಂದ್ಯದ 10ನೇ ಓವರ್ ನಲ್ಲಿ ಸ್ಪಿನ್ನರ್ ರಶೀದ್ ಹುಸೇನ್ ಓವರ್ ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಗಮನ ಸೆಳೆದರು. ರಶೀದ್ ಎಸೆದ ಮೊದಲ ಎಸೆತ ಪ್ಯಾಡ್ ಗೆ ಬಿದ್ದಿದ್ದರಿಂದ ಯಾವುದೇ ರನ್ ಬರಲಿಲ್ಲ. ಆದರೆ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡದ ಶತಕ ಪೂರೈಸಿದರು.
https://twitter.com/JioCinema/status/1845112730187071570