Saturday, July 6, 2024
Google search engine
Homeತಾಜಾ ಸುದ್ದಿ700 ಖಾತೆಗೆ 89 ಕೋಟಿ ಜಮೆ: ದನ ಕಾಯೋರು, ಎಮ್ಮೆ ಮೇಯಿಸೋರ ಖಾತೆಗೆ ಕೋಟಿ ಕೋಟಿ...

700 ಖಾತೆಗೆ 89 ಕೋಟಿ ಜಮೆ: ದನ ಕಾಯೋರು, ಎಮ್ಮೆ ಮೇಯಿಸೋರ ಖಾತೆಗೆ ಕೋಟಿ ಕೋಟಿ ಹಣ!

ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಬಗೆದಷ್ಟು ಆಳವಾದ ಭ್ರಷ್ಟಾಚಾರ ಬೆಳಕಿಗೆ ಬರುತ್ತಿದ್ದು, ಸಿಐಡಿ ಪೊಲೀಸರ ತನಿಖೆ ವೇಳೆ ದನ ಮೇಯಿಸೋರು, ಎಮ್ಮೆ ಕಾಯೋರ ಬ್ಯಾಂಕ್ ಖಾತೆಗಳಿಗೆ ಕೋಟಿ ಕೋಟಿ ಹಣ ಜಮೆ ಆಗಿರುವುದು ಬೆಳಕಿಗೆ ಬಂದಿದೆ.

ಎಸ್ ಐಟಿ ಪೊಲೀಸರು ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು, ಈತ ಮಧ್ಯವರ್ತಿಯಾಗಿ ಅರ್ಹತೆ ಇಲ್ಲದವರ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಜಮೆ ಮಾಡಿಸಿರುವುದು ಪತ್ತೆಯಾಗಿದೆ.

ಮಧ್ಯವರ್ತಿ ಮೂಲಕ ದನ ಮೇಯಿಸೋರು, ಎಮ್ಮೆ ಕಾಯೋರು, ಕುರಿ ಮೇಯಿಸುವವರ ಖಾತೆಗಳಿಗೆ 5 ಲಕ್ಷದಿಂದ 2 ಕೋಟಿ ರೂ.ವರೆಗೆ ಪ್ರತಿಯೊಬ್ಬರ ಖಾತೆ ಜಮಾ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಇದೇ ರೀತಿ ಮಧ್ಯವರ್ತಿಗಳ ಮೂಲಕ ಸುಮಾರು 700 ಖಾತೆಗಳಿಗೆ 89 ಕೋಟಿ ರೂ. ಜಮೆ ಮಾಡಲಾಗಿದ್ದು, ಈ ಮೊತ್ತವನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments