ಮಹಾರಾಷ್ಟ್ರ ವಿಧಾನಸಭಾ ಸ್ಥಾನಕ್ಕೆ ನಡೆದ ಮತದಾನ ಬುಧವಾರ ಅಂತ್ಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.
ಬಿಜೆಪಿ, ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟವಾದ ಮಹಾಯುತಿಗೆ ಸ್ಪಷ್ಟ ಬಹುಮತ ಲಭಿಸಲಿದೆ ಎಂದು ಸಮೀಕ್ಷೆಗಳು ಹೇಳಿದೆ.
ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಹುಮತ ಪಡೆಯಲು 145 ಸ್ಥಾನಗಳ ಅಗತ್ಯವಿದೆ.
ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮೈತ್ರಿಕೂಟವಾದ ಮಹಾ ವಿಕಾಸ್ ಅಂಗಡಿ ಪ್ರಬಲ ಪೈಪೋಟಿ ನೀಡಿದ್ದರೂ ಬಹುಮತ ಪಡೆಯುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಸಿಎನ್ ಎನ್ ಸಮೀಕ್ಷೆ ಪ್ರಕಾರ ಮಯುತಿಗೆ 145 ಸ್ಥಾನ ಲಭಿಸಲಿದ್ದರೆ, ಮಹಾ ವಿಕಾಸ್ ಅಂಗಡಿಗೆ 128 ಸ್ಥನ ಇತರೆ 8-10 ಸ್ಥಾನಗಳು ಲಭಿಸಲಿವೆ.
ಪಿ ಮಾರ್ಕ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮಯುತಿ ಮೈತ್ರಿಕೂಟಕ್ಕೆ 137-157 ಮಹಾ ವಿಕಾಸ್ ಅಂಗಡಿಗೆ 126-146 ಹಾಗೂ ಇತರೆ ಪಕ್ಷಗಳಿಗೆ 2-8 ಸ್ಥಾನ ಲಭಿಸಲಿದ್ದರೆ, ಮಾರ್ಟಿಜ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಮಯುತಿಗೆ 150-170 ಮಹಾವಿಕಾಸ್ ಅಂಗಡಿಗೆ 110-130 ಮತ್ತು ಇತರರಿಗೆ 8-10 ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.