Saturday, July 6, 2024
Google search engine
Homeಅಪರಾಧಮದುವೆ ನಿರಾಕರಿಸಿದ ಪ್ರಿಯಕರನ ಮರ್ಮಾಂಗಕ್ಕೆ ಕತ್ತರಿ ಹಾಕಿದ ವೈದ್ಯೆ!

ಮದುವೆ ನಿರಾಕರಿಸಿದ ಪ್ರಿಯಕರನ ಮರ್ಮಾಂಗಕ್ಕೆ ಕತ್ತರಿ ಹಾಕಿದ ವೈದ್ಯೆ!

ಮದುವೆ ಆಗಲು ನಿರಾಕರಿಸಿದ ಪ್ರಿಯಕರನ ಜನನಾಂಗವನ್ನೇ ಮಹಿಳಾ ವೈದ್ಯೆ ಕತ್ತರಿಸಿದ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.

ಸರಣ್ ಜಿಲ್ಲೆಯ ಮಧುರಾ ಬ್ಲಾಕ್ ನ ವಾರ್ಡ್ ನಂಬರ್ 12ರ ಕೌನ್ಸಿಲರ್ ಆಗಿರುವ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಲಾಗಿದ್ದು, ಮಹಿಳಾ ವೈದ್ಯೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳಾ ವೈದ್ಯೆ ಹಾಗೂ ಕೌನ್ಸಿಲರ್ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೌನ್ಸಿಲರ್ ಮದುವೆ ಆಗಲು ನಿರಾಕರಿಸುತ್ತಿದ್ದ. ಕೊನೆಗೆ ರಿಜಿಸ್ಟ್ರಾರ್ ಮದುವೆ ಆಗಲು ಓಲೈಸಿದ್ದಳು. ಆದರೆ ವೈದ್ಯೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾದು ನಿಂತಿದ್ದಳೇ ಹೊರತು ಆತ ಬರಲೇ ಇಲ್ಲ.

ಕೌನ್ಸಿಲರ್ ವರ್ತನೆಯಿಂದ ಕೆರಳಿದ ವೈದ್ಯೆ ಮನೆಗೆ ಆಹ್ವಾನಿಸಿದಳು. ಮನೆಗೆ ಬಂದ ಆತನ ಮರ್ಮಾಂಗವನ್ನೇ ಕತ್ತರಿಸಿದಳು. ಕೌನ್ಸಿಲರ್ ಕಣ್ಣೀರು ಹಾಕುತ್ತಾ ಜೋರಾಗಿ ಕೂಗಿಕೊಂಡಿದ್ದರಿಂದ ಅಕ್ಕಪಕ್ಕದ ಮನೆಯವರು ದೌಡಾಯಿಸಿ ನೋಡಿದಾಗ ರಕ್ತದ ಮಡುವಿನಲ್ಲಿ ಆತ ಒದ್ದಾಡುತ್ತಿದ್ದ.

25 ವರ್ಷದ ಮಹಿಳಾ ವೈದ್ಯೆ ಹಿಜ್ಜಾರ್ ಮೂಲದ ನಿವಾಸಿಯಾಗಿದ್ದು, ಮದುವೆ ಆಗಿರಲಿಲ್ಲ. ಮಧುರಾ ನಗರದಲ್ಲಿ ವೈದ್ಯೆ ವೃತ್ತಿ ನಡೆಸುತ್ತಿದ್ದಳು. ಕೌನ್ಸಿಲರ್ ಕೂಡ ಮದುವೆ ಆಗಿರಲಿಲ್ಲ.

ಮಹಿಳಾ ವೈದ್ಯೆಯನ್ನು ಬಂಧಿಸಿರುವ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಕೌನ್ಸಿಲರ್ ನನ್ನು ಪಾಟ್ನಾದ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments