ಲಂಚವಾಗಿ `ಆಲೂಗಡ್ಡೆ’ ನೀಡುವಂತೆ ಕೇಳಿ ಸಿಕ್ಕಿಬಿದ್ದ ಉತ್ತರ ಪ್ರದೇಶದ ಕನ್ನೌಚ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ನನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಇನ್ ಸ್ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ಲಂಚ ಸ್ವೀಕರಿಸಲು ಆಲೂಗಡ್ಡೆಯನ್ನು ಕೋಡ್ ವರ್ಡ್ (ಗುಪ್ತ ಸಂದೇಶ)ವಾಗಿ ಬಳಸಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಬಲ್ವಾಪುರ್ ಚಪ್ಪುನಾ ಚೌಕಿಯ ಸೌರಿಖ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ವಿರುದ್ಧ ಇಲಾಖಾ ತನಿಖೆಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಕನ್ನುಜ್ ಎಸ್ ಪಿ ಅಮಿತ್ ಕುಮಾರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ರೈತನ ಬಳಿ ತನ್ನ ದಿನದ ಖರ್ಚು 5 ಕೆಜಿ ಆಲೂಗಡ್ಡೆ ಆಗಿದ್ದು, ಅಷ್ಟನ್ನು ಕೊಡುವಂತೆ ರೈತನ ಬಳಿ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ರೈತ ನನಗೆ 2 ಕೆಜಿ ಆಲೂಗಡ್ಡೆಯಷ್ಟೇ ನೀಡಲು ಸಾಧ್ಯ ಎಂದು ಹೇಳಿದ್ದಾನೆ. ಕೊನೆಯ ವಾದ-ವಿವಾದದ ನಂತರ 3 ಕೆಜಿ ಆಲೂಗಡ್ಡೆಗೆ ರಾಜೀ ಆಗಿದೆ.